ಮಿಡಿಗೇಶಿ : ಅಂಜನೇಯ ಸ್ವಾಮಿ ದೇವಾಲಯದ ವಾಸ್ಕಲ್ ಪೂಜಾಕಾರ್ಯಕ್ರಮ

0
72

ಮಿಡಿಗೇಶಿ :


      ಜೂ 30 ಕೃಷ್ಣಾಪುರ ಗ್ರಾಮದಲ್ಲಿ ಶ್ರೀ ಅಂಜನೇಯ ಸ್ವಾಮಿ ನೂತನ ದೇವಾಯ ನಿರ್ಮಿಸುತ್ತಿರುವ ಕಲ್ಲಿನ ಕೆತ್ತನೆಯ ಶಿಲೆಯ ವಾಸ್ಕಲ್ ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ನಾಗರಾಜಾಚಾರ್‍ರವರಿಂದ ಜೂ.29ರ ಶುಕ್ರವಾರ ಬೆಳಿಗ್ಗೆ ನೆರವೇರಿಸಲಾಯಿತು.

      ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಚಿನ್ನೇನಹಳ್ಳಿ ಗ್ರಾಮಪಂಚಾಯಿತಿಗೆ ಸೇರಿದ ಕೃಷ್ಣಾಪುರ ಗ್ರಾಮದಲ್ಲಿನ ಶಿಥಿಲಾವಸ್ಥೆಯಲ್ಲಿದ್ದಂತಹ ಶ್ರೀ ಅಂಜನೇಯ ಸ್ವಾಮಿಯ ದೇವಸ್ಥಾನವನ್ನು ಕೆಡವಿ ನೂತನ ದೇವಾಲಯದ ಕಟ್ಟಡ ಪುನರ್ ನಿರ್ಮಾಣ ಮಾಡಲು ಗ್ರಾಮದ ಗ್ರಾಮಸ್ಥರ ಹಾಗೂ ಕೆಲದಾನಿಗಳವರಿಂದಚಂದಾ(ಹಣವನ್ನು)ವನ್ನು ಸಂಗ್ರಹಿಸುವ ಮೂಲಕ ನೂತನ ದೇವಾಲಯದ ಕಟ್ಟಡ ಪ್ರಾರಂಭಗೊಂಡಿದ್ದು ಪಾಯದ ಮಟ್ಟ ಆಗಿದ್ದು ಗರ್ಭಗುಡಿಯ ನಿರ್ಮಾಣ ಪ್ರಾರಂಭಗೊಂಡಿದ್ದು ತಮಿಳು ನಾಡಿನ ಮಹಾಲಿಂಗಪ್ಪ ಎನ್ನುವ ಶಿಲ್ಪಿಯವರಿಂದ ದೇವಸ್ಥಾನದ ಕಲ್ಲಿನ ಕೆತ್ತನೆ ಕೆಲಸ ನಡೆಯುತ್ತಿರುತ್ತದೆ.

      ಸದರಿ ವಾಸ್ಕಲ್ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಬಸವರಾಜು, ಪಿ.ಡಿ.ಓ ರಂಗನಾಥ್, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ರಾಜಣ್ಣ, ಮಂಜುನಾಥ ಹಿರಿಯ ಮುಖಂಡರುಗಳಾದ ರಾಮಚಂದ್ರಪ್ಪ, ಹೆಚ್.ರಾಮಚಂದ್ರಪ್ಪ, ರಮೇಶ್, ಜಯಣ,್ಣ ರಂಗರಾಜು, ಪಾಂಡುರಂಗಯ್ಯ, ಹನುಮಂತರಾಯಪ್ಪ, ಹಾಗೂ ಗ್ರಾಮದ ಗ್ರಾಮಸ್ಥರು ಮಹಿಳೆಯರು ಸದರಿ ವಾಸ್ಕಲ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here