ಅಕೇಶಿಯಾ-ನೀಲಗಿರಿ ಬದಲಿಗೆ ಬಿದಿರು ಬೆಳೆಸಲು ತೀರ್ಮಾನ

0
65

ಬೆಂಗಳೂರು:

      ಪರಿಸರಕ್ಕೆ ಮಾರಕವಾಗಿರುವ, ಅಂತರ್ಜಲ ನಾಷಕ್ಕೆ ಕಾರಣವಾಗಿರುವ ಅಕೇಶಿಯಾ, ನೀಲಗಿರಿ ಮರಗಳ ಬದಲಿಗೆ ಬಿದರು ಬೆಳೆಗೆ ಆದ್ಯತೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

      ಅಕೇಶಿಯಾ ಮತ್ತು ನೀಲಗಿರಿ ತೆಗೆದು ಹಾಕಿ ಆ ಭಾಗದಲ್ಲಿ ಬಿದರು ಬೆಳೆಯುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದಕ್ಕೆ ಆರ್ಥಿಕ ನೆರವು ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

      ವಿಧಾನಸೌಧದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಈ ವಿಷಯ ತಿಳಿಸಿದ್ದು, ಕೇಂದ್ರ ಸರ್ಕಾರದ ಬಿದರು ಅಭಿಯಾನ ಯೋಜನೆಯಡಿ ಆರ್ಥಿಕ ನೆರವು ಕಲ್ಪಿಸಲಾಗುವುದು. ಮೊದಲ ಹಂತದಲ್ಲಿ ಸರ್ಕಾರಿ ಭೂಮಿಯಲ್ಲಿ ಈಗಾಗಲೇ ಬೆಳೆದು ನಿಂತಿರುವ ಅಕೇಶಿಯಾ, ನೀಲಗಿರಿಗಳನ್ನು ಕಿತ್ತು ಹಾಕಿ ಎಲಿಫೆಂಟಾ ಹೆಸರಿನ ಬಿದರು ಬೆಳೆಯಲು ಉದ್ದೇಶಿಸಲಾಗಿದೆ ಎಂದರು,

      ನಂತರ ರೈತರು ತಮ್ಮ ಭೂಮಿಯಲ್ಲಿ ಬಿದಿರು ಬೆಳೆಯಲು ಮುಂದೆ ಬಂದಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ನೀಡಲಿದೆ. ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿದಿರು ಬೆಳೆ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ನಂತರ ಇಡೀ ರಾಜ್ಯಕ್ಕೆ ಇದನ್ನ ವಿಸ್ತರಿಸಲಾಗುವುದು. ಒಂದು ಟನ್ ಬಿದರಿಗೆ 2.5 ಲಕ್ಷ ರೂ ಬೆಲೆ ಇದೆ. ಬರಗಾಲದಲ್ಲೂ ಬಿದರು ಬೆಳೆಯಬಹುದಾಗಿದೆ ಎಂದರು.

      ಮುಂಗಾರು ಮತ್ತು ಹಿಂಗಾರು ಬೆಳೆಗಳ ಸಮೀಕ್ಷೆಗೆ ಇನ್ನು ಮುಂದೆ ಡ್ರೋಣ್‍ಗಳನ್ನು ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಕೃಷಿ ಅಧಿಕಾರಿಗಳು ರೈತರ ಭೂಮಿಗೆ ತೆರಳಿ ಬೆಳೆ ಸಮೀಕ್ಷೆ ನಡೆಸುವ ಪದ್ಧತಿಯನ್ನು ಕೈಬಿಡಲಾಗುವುದು. ವೈಜ್ಞಾನಿಕ ಕ್ರಮ ಅಳವಡಿಸಲಾಗುವುದು. ಹಾವೇರಿಯಲ್ಲಿ ಈಗಾಗಲೇ ಪ್ರಯತ್ನ ಯಶಸ್ವಿಯಾಗಿದೆ. ಡ್ರೋಣ್‍ನಿಂದ ಹೆಚ್ಚಿನ ಪ್ರದೇಶದಲ್ಲಿ ಸಮೀಕ್ಷೆ ನಡೆಸಬಹುದು. ತ್ವರಿತವಾಗಿ ಸಮೀಕ್ಷೆ ನಡೆಸಿ ರೈತರ ವಿಮೆ ಅಂದಾಜಿಗೆ ಸಹ ಇದು ಅನುಕೂಲವಾಗಲಿದೆ ಎಂದರು.

      ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಬೆಳಕು ಯೋಜನೆಯನ್ವಯ ರೈತರ ಖಾತೆಗಳಿಗೆ 10 ಸಾವಿರ ರೂ. ಜಮಾ ಮಾಡಲು ಸರ್ಕಾರ ತೀರ್ಮಾನಿಸಿದೆ. ಸಾಲಮನ್ನಾದ ಪ್ರಯೋಜನ ಪಡೆಯದ ರೈತರಿಗೆ ಮಾತ್ರ ಇದು ಅನ್ವಯ ಆಗಲಿದೆ ಎಂದರು.

LEAVE A REPLY

Please enter your comment!
Please enter your name here