ಅಕ್ರಮ ಮರಳು : ತಡೆದ ನೌಕರನ ಮೇಲೆ ಹಲ್ಲೆ

0
41

ಪಾವಗಡ

ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನುಸುಳಿ ಮರಳನ್ನು ತುಂಬುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಹೋದ ಅರಣ್ಯ ರಕ್ಷಕನಿಗೆ ಚಪ್ಪಲಿಯಿಂದ ಒಡೆದ ಘಟನೆ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಾವಗಡ ತಾಲ್ಲೂಕಿನ ವದನಕಲ್ಲು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಗಸ್ತು ತಿರುಗುವ ವೇಳೆ ಅಕ್ರಮವಾಗಿ ಮೀಸಲು ಅರಣ್ಯ ಪ್ರದೇಶದಲ್ಲಿ ನುಸುಳಿ ಮರಳನ್ನು ಟ್ರ್ಯಾಕ್ಟರ್‍ಗೆ ಕೆಲವರು ತುಂಬುತ್ತಿದ್ದರು. ಇದನ್ನು ಕಂಡು ತಡೆಯಲು ಹೋದ ಅರಣ್ಯ ರಕ್ಷಕ ತಿಪ್ಪೇಸ್ವಾಮಿ ಮೇಲೆ ಮಲ್ಲಮ್ಮನಹಳ್ಳಿ ಗ್ರಾಮದ ನಾಗೇಂದ್ರ ರೆಡ್ಡಿ ಮತ್ತು ಮಕ್ಕಳಾದ ಗಿರೀಶ್, ವೀರೇಶ್ ಸೇರಿ ಹಲ್ಲೆ ನಡೆಸಿ, ಚಪ್ಪಲಿಯಿಂದ ಒಡೆದಿದ್ದಾರೆ. ಈ ಘಟನೆ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here