ಅಕ್ರಮ ಮರಳು ದಂದೆ : ಸಿಎಂರಲ್ಲಿ ಮನವಿ

0
54

ಬೆಂಗಳೂರು,

    ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂರಲ್ಲಿ ಮನವಿ ಮಾಡಲಾಗಿದೆ ಎಂದು ಪರಿಷತ್ತು ಪ್ರತಿಪಕ್ಷ ನಾಯಕ ಕೋಟಾ ಶ್ರೀನುವಾಸ ಪೂಜಾರಿ ತಿಳಿಸಿದರು.
ಗೃಹಕಚೇರಿ ಕೃಷ್ಣಾ ದಲ್ಲಿ ಸಿಎಂ ಕುಮಾರಸ್ವಾಮಿ ರನ್ನು ಈ ವಿಚಾರವಾಗಿ ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಗಣಿ ಇಲಾಖೆ ಮನಿ ಇಲಾಖೆಯಾಗಿ ಪರಿವರ್ತನೆಗೊಂಡಿದೆ. ದ.ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಬಡವರಿಗೆ ಮನೆ ಕಟ್ಟಲು ಮರಳು ಸಿಗದ ಪರಿಸ್ಥಿತಿ ಎದುರಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮರಳು ಮಾಫಿಯಾ ಹೆಚ್ಚಾಗಿದೆ. ಉಡುಪಿ, ಮಂಗಳೂರು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಳು ಮಾಫಿಯಾ ಹೆಚ್ಚಾಗಿದೆ. ಈ ಬಗ್ಗೆ ಲಿಖಿತ ರೂಪದ ಮನವಿ ಮಾಡಿದ್ದೇವೆ ಎಂದು ವಿವರಿಸಿದರು.

   ಕಾನೂನು ಹೆಸ್ರಲ್ಲಿ ಬಡವರ ಮಕ್ಕಳನ್ನ ಜೈಲಿಗೆ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಸಿಎಂ ಇನ್ನೊಂದು ವಾರದಲ್ಲಿ ಜಿಲ್ಲೆಗೆ ಭೇಟಿ ನೀಡಬೇಕು ಅಂತ ಮನವಿ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಜಿಲ್ಲೆಗೆ ಭೇಟಿ ನೀಡೋದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

   ಕರಾವಳಿ ಜಿಲ್ಲೆಯಲ್ಲಿ ರೈತರ ಮನೆಗೆ ನುಗ್ಗಿ ಗೋವುಗಳ ಅಪಹರಣ ಮಾಡಲಾಗುತ್ತಿದೆ. ರೈತರ ಮನೆಯ ನಾಯಿಗಳಿಗೆ ವಿಷ ಹಾಕಿ ಕೊಲ್ಲಲಾಗುತ್ತಿದೆ. ಈ ಬಗ್ಗೆ ಕ್ರಮವಹಿಸುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಆರೋಪಿಗಳನ್ನ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಅಂತ ಮನವಿ ಮಾಡಿದ್ದೇವೆ. ಅಪಹರಣವಾಗಿರುವ ಗೋವುಗಳ ಮಾಲೀಕರಿಗೆ ಪರಿಹಾರ ನೀಡಬೇಕು ಆಗ್ರಹ ಮಾಡಿದ್ದೇವೆ ಎಂದು ತಿಳಿಸಿದರು. ರೈತರ ಸಾಲಮನ್ನಾ ನಿಯಮದ ಸುತ್ತೋಲೆ ಅಧಿಕೃತವಾಗಿ ಹೊರಡಿಸುವಂತೆ ಸಿಎಂಗೆ ಆಗ್ರಹ ಮಾಡಿದ್ದೇವೆ. ಎರಡು ಮೂರು ದಿನಗಳಲ್ಲಿ ಆದೇಶ ಹೊರಡಿಸೋದಾಗಿ ಸಿಎಂ ಹೇಳಿದ್ದಾರೆ ಎಂದರು.

   ಕರಾವಳಿ ಜಿಲ್ಲೆಯ ದೇವಸ್ಥಾನದ ವಿಗ್ರಹಗಳು, ಪ್ರಬಾವಳಿ, ಚಿನ್ನದ ಸರಗಳು ಅಪಹರಣವಾಗುತ್ತಿವೆ. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬಳಕೆ ಆಗದೆ ಹಣ ಉಳಿದುಕೊಂಡಿವೆ. ಇಂತಹ ದೇವಸ್ಥಾನಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ದೇವಸ್ಥಾನಗಳಿಗೆ ಭದ್ರತೆ ಕೊಡಬೇಕು. ಅಂತ ಮನವಿ ಮಾಡಿದ್ದೇವೆ. ಈ ಬಗ್ಗೆ ಸಿಎಂ ಕ್ರಮ ತೆಗೆದುಕೊಳ್ಳೊದಾಗಿ ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಒಂದು ವೇಳೆ ಸಿಎಂ ಕ್ರಮ ತೆಗೆದುಕೊಳ್ಳದೇ ಇದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

   ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಮೀನಾಮೇಷ:ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಮೀನಾಮೇಷ ಎಣಿಸುತ್ತಿದೆ ಎಂದು ಇದೇ ವೇಳೆ ಆರೋಪಿಸಿದ ಶ್ರೀನಿವಾಸ ಪೂಜಾರಿ, ಮಹಿಳೆಯರಿಗೆ 50% ಮೀಸಲಾತಿ ನೀಡಬೇಕು ಅಂತ ನಮ್ಮ ಸರ್ಕಾರ ಕಾನೂನು ತಂದಿತ್ತು. ಆದರೆ ಈ ಸರ್ಕಾರ ಮೀಸಲಾತಿ ನೀಡಿ ತಿದ್ದುಪಡಿ ತಂದಿದೆ. ಚುನಾವಣೆ ಮುಂದೂಡಲು ಸರ್ಕಾರ ಈ ಗೊಂದಲ ಮೂಡಿಸಿದೆ. ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ರೆ ಮೀಸಲಾತಿ ಗೊಂದಲ ಮಾಡದೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

   ಮೇಲ್ಮನೆ ಸದಸ್ಯ ರವಿಕುಮಾರ್ ಮಾತನಾಡಿ, ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ 50 % ಗಿಂತ ಹೆಚ್ಚು ಉಪನ್ಯಾಸಕರ, ಪ್ರೊಪೆಸರ್  ಗಳು ಹುದ್ದೆಗಳು ಖಾಲಿ ಇವೆ. 9 ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳು ಇಲ್ಲ ಎಂದು ಸದಸ್ಯ ರವಿ ಕುಮಾರ್ ತಿಳಿಸಿದರು.
30 ಸಾವಿರ ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಮುಚ್ಚುವ ಸ್ಥಿತಿಗೆ ತಲುಪಿದೆ. ಕೂಡಲೇ ಉಪನ್ಯಾಕರು, ಪ್ರೊಪೆಸರ್ಗಳು, ಶಿಕ್ಷಕರ ನೇಮಕ ಮಾಡಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸರ್ಕಾರಿ ಹಾಸ್ಟೆಲ್ ಗಳಲ್ಲಿ ನರಕ ಪರಿಸ್ಥಿತಿ ಇದೆ. ಹಾಸ್ಟೆಲ್ ಪರಿಸ್ಥಿತಿಯನ್ನು ಅಭಿವೃದ್ಧಿ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

LEAVE A REPLY

Please enter your comment!
Please enter your name here