ಅಕ್ಷರ ಜ್ಞಾನವನ್ನು ಪಡೆದ ಮಹಿಳೆ ಮಾತ್ರ ಅಧಿಕಾರ ನಡೆಸಲು ಸಾಧ್ಯ

0
40

ಚಳ್ಳಕೆರೆ

            ಹಲವಾರು ಸೌಲಭ್ಯಗಳನ್ನು ಜನತೆಯ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ತಂದಿರುವ ಸರ್ಕಾರ ವಿಶೇಷ ಭಾಗ್ಯಗಳ ಮೂಲಕ ಜನರ ಗಮನ ಸೆಳೆದಿದೆ. ಸರ್ಕಾರ ವಿಶೇಷ ಸೌಲಭ್ಯಗಳು ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ನಾಂದಿಯಾಗಿವೆ. ವಿಶೇಷವಾಗಿ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಭಾಗ್ಯ ನೀಡುವ ಹಿನ್ನೆಲೆಯಲ್ಲಿ ಲೋಕ ಶಿಕ್ಷಣ ಸಂಸ್ಥೆ ಮೂಲಕ ಅಕ್ಷರ ಜ್ಞಾನದ ಭಾಗ್ಯವನ್ನು ಸರ್ಕಾರ ನೀಡಿದ್ದು, ಮಹಿಳೆಯರು ಈ ಯೋಜನೆಯ ಸದುಪಯೋಗವನ್ನು ಪೂರ್ವ ಪ್ರಮಾಣದಲ್ಲಿ ಪಡೆದುಕೊಳ್ಳುವಂತೆ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಅನುಷ್ಠಾನ ಅಧಿಕಾರಿ ನಾಗರಾಜು ತಿಳಿಸಿದರು.
           ಅವರು, ಶುಕ್ರವಾರ ತಾಲ್ಲೂಕಿನ ಸಿದ್ದೇಶ್ವದುರ್ಗ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಸಿದ್ದೇಶ್ವರದುರ್ಗ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಸಾಕ್ಷರಥ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  
           ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯಕ್ರಮ ಸಹಾಯಾಧಿಕಾರಿ ತಿಪ್ಪೇಸ್ವಾಮಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಅಕ್ಷರ ಕಲಿಕೆಯ ಅಭ್ಯಾಸಕ್ಕೆ ಹಿನ್ನಡೆ ಉಂಟಾಗುತ್ತಿದೆ. ಮಹಿಳೆಯರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಕ್ಷರಸ್ಥ ಮಹಿಳೆಗೆ ಈ ಯೋಜನೆಯಡಿ ಅಕ್ಷರವನ್ನು ಕಲಿಸಿ ಅವಳನ್ನು ಸಮಾಜದಲ್ಲಿ ಶಕ್ತಿಯನ್ನಾಗಿ ರೂಪಿಸಲು ಈ ಯೋಜನೆ ಉಪಯುಕ್ತವೆಂದರು.
            ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಮ್ಮ ಮಾತನಾಡಿ, ಮಹಿಳೆಯರು ಅಕ್ಷರವಂತರಾದಲ್ಲಿ ಮಾತ್ರ ಸಮಾಜದಲ್ಲಿ ಉತ್ತಮ ಗೌರವವನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಕ್ಷರ ಮಹಿಳೆಯ ವ್ಯಕ್ತಿತ್ವವವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಕ್ಷರ ಕಲಿತ ಮಹಿಳೆ ಮಾತ್ರ ಅಧಿಕಾರ ನಡೆಯುವ ಸಾಮಥ್ರ್ಯವನ್ನು ಪಡೆಯುತ್ತಾಳೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಿತ್ತಮ್ಮ, ನಾಗರಾಜು, ರಂಗಣ್ಣ, ಮುಖ್ಯೋಪಾಧ್ಯಾಯಿನಿ ಮಂಜುಳಾ, ಜಿಲ್ಲಾ ಸಹಾಯಕ ಅಧಿಕಾರಿ ಜಿ.ಎಚ್.ಪ್ರಭಾಕರ, ಸಹ ಶಿಕ್ಷಕ ಶಿವಣ್ಣ, ಕಾಟಪ್ಪ, ರಾಜಣ್ಣ ಮುಂತಾದವರು ಭಾಗವಹಿಸಿದ್ದರು. ತಾಲ್ಲೂಕು ಅಕ್ಷರವಾಣಿ ಅಧಿಕಾರಿ ಗುರುಸಿದ್ದಪ್ಪ ಸ್ವಾಗತಿಸಿದರು, ಗಜಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here