ಅಟ್ರಾಸಿಟಿ ಕಾಯ್ದೆ ಸಂಪೂರ್ಣ ಜಾರಿಗೆ ಒತ್ತಾಯಿಸಿ ದೆಹಲಿ ಚಲೋ

0
35

ತುಮಕೂರು:

      ಎಸ್.ಸಿ./ಎಸ್.ಟಿ. ಅಟ್ರಾಸಿಟಿ ಕಾಯ್ದೆಯನ್ನು ಸಂಪೂರ್ಣವಾಗಿ ಯಥಾಸ್ಥಿತಿಯಲ್ಲಿ ಮುಂದುವರೆಸು ವಂತೆ ಒತ್ತಾಯಿಸಿ ಆ.8 ರಂದು ದಲಿತ ಗಿರಿಜನ ಸಿಂಹಘರ್ಜನೆ ಚಲೋ ದೆಹಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

      ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷ ಬಿ.ನರಸಪ್ಪ ಮಾದಿಗರು ಮಾತನಾಡುತ್ತಾ ಕರ್ನಾಟಕದಲ್ಲಿ 1997 ರಲ್ಲಿ ಮಂದಕೃಷ್ಣ ಮಾದಿಗರ ನೇತೃತ್ವದಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಒತ್ತಾಯಿಸಿ 20 ವರ್ಷಗಳಿಂದ ಹಲವಾರು ವರ್ಷಗಳಿಂದ ಮಾದಿಗ ದಂಡೋರ ಪ್ರತಿಭಟನೆ ಮಾಡಿಕೊಂಡು ಬರುತ್ತಿದೆ. ಪರಿಶಿಷ್ಟ ಜಾತಿಯ ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿ ವರ್ಗೀಕರಿಸಿ ಸರ್ಕಾರಕ್ಕೆ 2011 ರಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಲ್ಲಿಸಿದ್ದು, ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಹಾಗೂ ಜಿಲ್ಲಾ ಮಾದಿಗ ದಂಡೋರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.

      ಇದರ ಜೊತೆಗೆ ಸರ್ವೋಚ್ಛ ನ್ಯಾಯಾಲಯ 20.4.2018 ರ ತೀರ್ಪಿನಲ್ಲಿ ನಾವು ಕಾನೂನಿನಿಂದ ರಕ್ಷಣೆ ಪಡೆಯಲು ಇದ್ದ ಅವಕಾಶಗಳನ್ನು ನಿರ್ಮಿತಿಗೊಳಿಸಿ ತೀರ್ಪು ನೀಡಿದೆ. ಈ ಗಂಡಾಂತಕಾರಿ ಆದೇಶವನ್ನು ಪರಿಶೀಲಿಸಲು ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದು ದಲಿತ ಪ್ರತಿಭಟನಾಕಾರರು ಪೊಲೀಸರ ಗುಂಡೇಟಿಗೆ ಬಲಿಯಾದರು. ಈ ಅನ್ಯಾಯವನ್ನು ಖಂಡಿಸಿ ರಾಷ್ಟ್ರವ್ಯಾಪಿ ಹಲವು ಹೋರಾಟಗಳು, ಪ್ರತಿಭಟನೆಗಳು ನಡೆದವು ಎಂದು ರಾಜ್ಯಾಧ್ಯಕ್ಷ ನರಸಪ್ಪ ತಿಳಿಸಿದರು.

      ರಾಜ್ಯ ವಕ್ತಾರ ಎಂ.ವಿ. ರಾಘವೇಂದ್ರಸ್ವಾಮಿ ಮಾತನಾಡಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಂದಕೃಷ್ಣ ಮಾದಿಗರವರ ನೇತೃತ್ವವದಲ್ಲಿ ಈಗಾಗಲೇ ದಲಿತರೆಲ್ಲರೂ ಒಗ್ಗೂಡಿ ಕೇಂದ್ರ ಸರ್ಕಾರವನ್ನು ಎಚ್ಚರಗೊಳಿಸುವ ಕಾರ್ಯ ಮಾಡಿದ್ದಾರೆ ಎಂದ ಅವರು ಅಸ್ಪøಶ್ಯರ ದೌರ್ಜನ್ಯ ತಡೆ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಪರಿಷ್ಕರಣೆಗೊಳಿಸದೆ ಯಥಾವತ್ತಾಗಿ ನಿರ್ವಹಿಸಲು ಒತ್ತಾಯಿಸಿ ದಲಿತ, ಗಿರಿಜನರು ಆ.8 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಗ್ರ ಪ್ರತಿಭಟನೆ ಮೂಲಕ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ಮಾದಿಗ ದಂಡೋರ ಜಿಲ್ಲಾಧ್ಯಕ್ಷ ನಾಗರಾಜು ಗೂಳಹರಿವೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here