ಅನ್ನ ಮಾರ್ಗದ ಮುಂದೆ ಅನ್ಯ ಮಾರ್ಗವಿಲ್ಲ

0
37

ತುಮಕೂರು:

             ಬೇಡಿ ಬಂದ ಭಕ್ತರಿಗೆ ಹಸಿವು ನೀಗಿಸುವ ಬಾಬ ಅನ್ನ ಮಾರ್ಗದ ಮುಂದೆ ಅನ್ಯ ಮಾರ್ಗವಿಲ್ಲ ಎಂಬ ನಾಣ್ಣುಡಿಯಂತೆ ಅನ್ನ ಮನುಷ್ಯನ ಜೀವನದಲ್ಲಿ ಮಹತ್ತರ ಸ್ಥಾನವನ್ನು ಪಡೆದಿದೆ.ಹಸಿದವನಿಗೆ ಮಾತ್ರ ತಿಳಿಯುತ್ತೆ ಅನ್ನದ ಮಹತ್ವ ಏನು ಎಂಬೂದು.

                ಕರ್ನಾಟಕದಲ್ಲಿ ಹಲವು ದೇವಾಲಯಗಳಿವೆ ನಮ್ಮ ರಾಜ್ಯದ ದೇವಾಲಯಗಳು ಪ್ರಸಿದ್ದಿ ಪಡೆದಿರುವುದು ಅನ್ನ ದಾಸೋಹದಿಂದ. ಈ ಅನ್ನ ದಾಸೋಹ ನಮ್ಮ ದೇವಾಲಯಗಳ ಅವಿಭಾಜ್ಯ ಅಂಗವಾಗಿದೆ. ರಾಜ್ಯದ ಪ್ರತಿಯೊಂದು ದೇವಾಲಯಕ್ಕೆ ತನ್ನದೇ ಆದ ಇತಿಹಾಸ ಇರುತ್ತದೆ ಹಾಗೂ ರಾಜ್ಯದ ದೇವಾಲಯಗಳನ್ನು ನೋಡಲು ಹೊರ ರಾಜ್ಯ ಮತ್ತು ವಿವಿಧ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ತುಮಕೂರು ಎಂದಾಕ್ಷಣ ನಮ್ಮ ಅರಿವಿಗೆ ಬರುವುದು ಶ್ರೀ ಸಿದ್ದಗಂಗಾ ಮಠ ಮತ್ತು ಅಲ್ಲಿ ಅನ್ನ ದಾಸೋಹ ನಡೆಸುವ ಶ್ರೀ ಶಿವಕುಮಾರ್ ಮಹಾ ಸ್ವಾಮೀಜಿಗಳು. ಆದ್ರೆ ಮಠ ಹೊರೆತುಪಡಿಸಿ ಇಲ್ಲಿ ಒಂದು ದೇವಾಲಯ ಜಿಲ್ಲೆಯ ಮತ್ತು ಹೊರ ಜಿಲ್ಲೆ ವಿವಿಧ ರಾಜ್ಯಗಳಿಂದ ಹಸಿದು ಬಂದವರಿಗೆ ಅನ್ನ ನೀಡಿ ಅವರ ಹಸಿವನ್ನು ತೀರಿಸುತ್ತಿದೆ. ಅದು ಯಾವ ದೇವಾಲಯ ಅಂತಾ ಯೋಚಿಸ್ತಾಯಿದೀರಾ ಅದುವೇ ನೋಡಿ ಶ್ರೀ ಶಿರಿಡಿ ಸಾಯಿಬಾಬ ದೇವಾಲಯ. ನಗರದ ಕುಣಿಗಲ್ ರಸ್ಥೆಯಿಂದ ರಾಮಕೃಷ್ಣ ನಗರದ ಕಡೆ ಸ್ವಲ್ಪ ದೂರ ಹಾದು ಹೋದರೆ ಈ ಸುಂದರ ಸಾಯಿಬಾಬರ ಮಂದಿರ ನಮ್ಮ ಕಣ್ಣಿಗೆ ಬೀಳುತ್ತದೆ. ಶಿರಿಡಿಯಲ್ಲಿ ಬಾಬರಿಗೆ ಯಾವ ರೀತಿಯ ಅರ್ಚನೆ ನಡೆಯೊತ್ತೋ ಇಲ್ಲಿ ಕೂಡ ಅದೇ ರೀತಿ ಅರ್ಚನೆ ನಡೆಸಲಾಗುತ್ತದೆ.

      ಎಂಟು ವರ್ಷದಿಂದ ನಿರಂತರ ಸೇವೆ :
              ಸಾಯಿ ಬಾಬರ ಮಂದಿರವು 2010 ರಲ್ಲಿ ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣವಾಯಿತು. ಮೊದಲ ದಿನದಿಂದಲೇ ಇಲ್ಲಿ ಅನ್ನ ದಾಸೋಹ ಕಾರ್ಯ ನಡೆಯುತ್ತಿದೆ . ಪ್ರಾರಂಭದಲ್ಲಿ ಮಂದಿರಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು ಆ ಹಂತ ಹಂತವಾಗಿ ಇದು ಬದಲಾಗ ತೊಡಗಿತು ಎಂದು ದೇವಾಲಯದ ಪಡಿಂತರು ತಿಳಿಸುತ್ತಾರೆ.
ದ್ವಾರಕಗಳು ಕೈ ಬೀಸಿ ಕರೆಯುತ್ತವೆ :
           ದೇವಾಲಯದ ಎಡ ಮತ್ತು ಬಲ ಭಾಗದಲ್ಲಿರುವ ಶ್ರದ್ಧಾ ಮತ್ತು ಸಬೂರಿ ಎಂಬ ದ್ವಾರಕಗಳು ಭಕ್ತರನ್ನು ಸ್ವಾಗತಿಸುತ್ತವೆ. ಇವುಗಳ ಅರ್ಥ ಶ್ರದ್ದ್ಧಾ ಎಂದರೆ ಶ್ರದ್ಧೆ , ಸಬೂರಿ ಎಂದರೆ ತಾಳ್ಮೆ ಇವೆರಡನ್ನು ಮೈ ಗೂಡಿಸಿಕೊಂಡವರು ಉತ್ತಮ ಜೀವನ ನಡಸುತ್ತಾನೆ ಎಂಬುವುದಾಗಿದೆ. ಹಾಗೂ ಎರಡು ಮಹಾ ದ್ವಾರಕಗಳು ದೇವಸ್ಥಾನದ ಮೆರುಗನ್ನು ಹೆಚ್ಚುಸುವುದಲ್ಲದೆ ಭಕ್ತಾಧಿಗಳನ್ನು ಮತ್ತು ದಾರಿ ಹೋಕರನ್ನು ಒಮ್ಮೆ ಕೈ ಬೀಸಿ ಕರೆಯುತ್ತವೆ.
ಸ್ವಚ್ಛತೆಯಿಂದ ಕೂಡಿರುವ ಆವರಣ :
            ಇನ್ನೂ ಆವರಣವನ್ನು ನೋಡುವುದಾದದರೆ ಸದಾ ಸ್ವಚ್ಛತೆಯಿಂದ ಕೂಡಿರುತ್ತದೆ. ಪ್ರತಿದಿನ ಭಕ್ತರು ಆಗಮಿಸಿದರೂ ಮಂದಿರವನ್ನು ಯಾವುದೇ ಕಸ ಕಡ್ಡಿಯಿಲ್ಲದಂತೆ ಪರಿಶುದ್ದವಾಗಿ ಕಾಪಾಡಿಕೊಂಡು ಬರುವುದು ಇಲ್ಲಿ ಕೆಲಸ ಮಾಡುವವರ ಮುಖ್ಯ ಕರ್ತವ್ಯ ವಾಗಿದೆ.

LEAVE A REPLY

Please enter your comment!
Please enter your name here