ಅಪ್ಪು ಸಿನಿಮಾಗಳ ಹೆಸರಿನಲ್ಲೇ ಆಮಂತ್ರಣ ಪತ್ರಿಕೆ

0
32

¨ಅಭಿಮಾನಿಗಳ ಯೋಚನೆಗಳನ್ನ ನೋಡಿ ಸ್ಟಾರ್ ಗಳೇ ದಂಗಾಗಿ ಹೋಗಿರುತ್ತಾರೆ. ಅಷ್ಟರ ಮಟ್ಟಿಗೆ ಅವರ ಆಲೋಚನೆಗಳು ನಿಲುಕುತ್ತವೆ. ಅಂತದ್ದೇ ಒಂದು ಅನುಭವ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಆಗಿದೆ.

      ಪವರ್ ಸ್ಟಾರ್ ಅಭಿಮಾನಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಅಪ್ಪು ಸಿನಿಮಾ ಹೆಸರುಗಳನ್ನ ಸೇರಿಸಿ ಮಾಡಿಸಿದ್ದಾರೆ. ಮಾಗಡಿ ಮೂಲದ ನವೀನ್ ತಮ್ಮ ಮದುವೆ ಪತ್ರಿಕೆಯನ್ನು ವಿಶೇಷವಾಗಿ ಪ್ರಿಂಟ್ ಮಾಡಿಸಿದ್ದಾರೆ. ‘ಆಕಾಶ್’ ವೇ ಚಪ್ಪರ..’ಪೃಥ್ವಿ’ಯೇ ಹಸೆಮಣೆ..ಮದುವೆಯೇ ‘ಮಿಲನ’..ಈ ನವೀನ ‘ಮೈತ್ರಿ’..ಬದುಕಿಗೆ ‘ಹೊಸ ಬೆಳಕು’ ಪ್ರೀತಿ.. ಪವರ್ ಸ್ಟಾರ್ ಫಿಟ್ನೆಸ್ ಚಾಲೆಂಜ್ ಗೆ ಅಭಿಮಾನಿಗಳು ಫಿದಾ ‘ಪರಮಾತ್ಮ’ ನ ಸ್ಮರಿಸುತ್ತಾ.. ನಮ್ಮೆಲ್ಲರ ‘ಅಭಿ’ ಮಾನದ ಆಶೀರ್ವಾದ ಬಯಸುತ್ತಿರುವ..’ಎರಡು ನಕ್ಷತ್ರಗಳು’ ನವೀನ್ ಕುಮಾರ್, ರಶ್ಮಿ…’ಬಿಂದಾಸ್’ ಆಗಿ ಬನ್ನಿ.. ಆರತಕ್ಷತೆಯ ‘ಅಪ್ಪು’ ಗೆ.. ಮುಹೂರ್ತದ ‘ಪವರ್’ ಹೀಗೆ ಎಲ್ಲ ಸಿನಿಮಾ ಹೆಸರುಗಳನ್ನು ಬಳಸಿಕೊಂಡಿದ್ದಾರೆ.

       ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿವಾಹದ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು ಟ್ವಿಟ್ಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಅಕೌಂಟ್ ನಿಂದ ನವ ಜೋಡಿಗಳಾದ ನವೀನ್ ಹಾಗೂ ರಶ್ಮಿ ಅವರಿಗೆ ಶುಭಾಶಯವನ್ನು ಕೋರಿದ್ದಾರೆ. ಅಂದ್ಹಾಗೆ ನವೀನ್ ಮತ್ತು ರಶ್ಮೀ ಮದುವೆ ಮಾಗಡಿ ಕಲ್ಯಾಣ ಮಂಟಪದಲ್ಲಿ ಇದೇ ತಿಂಗಳ ಅಂದರೆ ಜೂನ್ 17-18 ರಂದು ನಡೆಯುತ್ತಿದೆ.

LEAVE A REPLY

Please enter your comment!
Please enter your name here