ಅಪ್ರಾಪ್ತ ಪ್ರೇಮಿಗಳನ್ನು ಬಲಿ ಪಡೆದ ಪ್ರೀತಿ..!

0
110

ಮಧುಗಿರಿ: 

      ಸತತ 2 ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದ ಇಬ್ಬರು ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವವನ್ನೇ ಪ್ರೀತಿಗೆ ಅರ್ಪಿಸಿದ ದುರ್ಘಟನೆ ನಡೆದಿದೆ. 

      ಸಂದೇಶ್(17) ಹಾಗೂ ಮೀನಾಕ್ಷಿ(17) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಪ್ರೇಮಿಗಳು. ಸಂದೇಶ್ ಹಾಗೂ ಮೀನಾಕ್ಷಿ ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮಧುಗಿರಿ ತಾಲೂಕಿನ ಸುದ್ದೇಗುಂಟೆ ಗ್ರಾಮದ ಹೊರವಲಯದ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

       ತಮ್ಮ ಪ್ರೀತಿಯನ್ನು ತಮ್ಮ ಕುಟುಂಬಗಳು ಒಪ್ಪುವುದಿಲ್ಲ ಎಂದು ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗುತ್ತಿದ್ದು,  ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂದು ತಿಳಿದುಬಂದಿರುವುದಿಲ್ಲ. ಸದ್ಯ ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here