ಅಮ್ಮನಘಟ್ಟ ಪ್ರೌಢಶಾಲಾ ಸಂಸತ್ ಚುನಾವಣೆ..!

0
20

ಗುಬ್ಬಿ:

      ನ್ಯಾಯ ಸಮ್ಮತ ಮತದಾನ ಮತ್ತು ಪ್ರಜಾತಂತ್ರ ವ್ಯವಸ್ಥೆಯ ವಿವಿಧ ಆಯಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಮತ್ತು ನಾಯಕತ್ವ ಗುಣ ಬೆಳೆಸುವ ಸದುದ್ದೇಶದಿಂದ ತಾಲ್ಲೂಕಿನ ಅಮ್ಮನಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್‍ಗೆ ಚುನಾವಣೆ ನಡೆಸಲಾಯಿತು. 9 ಸ್ಥಾನಗಳಿಗೆ ನಡೆದ ಚುನಾವಣೆಗೆ ಮೂರು ತರಗತಿಯಿಂದ ಒಟ್ಟು 26 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದರು. ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರು ಸೇರಿದಂತೆ ಒಟ್ಟು 110 ಮತದಾರರು ತಮ್ಮ ಹಕ್ಕು ಚಲಾಯಿಸಿದರು.

      ಮತದಾನಕ್ಕೆ ಅಗತ್ಯವಾದ ಎಲ್ಲಾ ರೀತಿಯ ತಯಾರಿಗಳನ್ನು ವ್ಯವಸ್ಥಿತವಾಗಿ ಮಾಡಲಾಗಿದ್ದು, ಸ್ಪರ್ಧಾಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳಿಗೂ ಚಿಹ್ನೆಗಳನ್ನು ನೀಡಲಾಗಿತ್ತು. ಚುನಾವಣೆಯ ದಿನದಂದು ಸರತಿಯ ಸಾಲಿನಲ್ಲಿ ನಿಂತು ವಿದ್ಯಾರ್ಥಿಗಳು ತಮ್ಮ ಅಭ್ಯರ್ಥಿಯ ಪರ ಮತದಾನ ಮಾಡಿದರು. ಮತದಾರರು ಪಾರದÀರ್ಶಕವಾಗಿ ಮತದಾನ ಮಾಡಲು ಅನುಕೂಲವಾಗುವಂತೆ ಮತದಾನ ಕೇಂದ್ರ, ಮತಗಟ್ಟೆ ಅಧಿಕಾರಿಗಳು, ಗುಪ್ತ ಮತದಾನಕ್ಕೆ ಮತದಾನ ಅಂಕಣ, ಮತಪೆಟ್ಟಿಗೆ ಸೇರಿದಂತೆ ವಿದ್ಯಾರ್ಥಿಗಳು ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡಲು ರಕ್ಷಣಾ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು.

      ಮತದಾನದ ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆದು 9 ಅಭ್ಯರ್ಥಿಗಳು ಆಯ್ಕೆಯಾದರು. ಆಯ್ಕೆಯಾದವರನ್ನು ಒಂದೆಡೆ ಸೇರಿಸಿ ಸಭೆ ನಡೆಸಿ ಶಾಲಾ ಸಂಸತ್‍ನ ನೂತನ ಸಚಿವ ಸಂಪುಟವನ್ನು ರಚಿಸಲಾಯಿತು.

      ಮುಖ್ಯಮಂತ್ರಿಯಾಗಿ 10 ನೇ ತರಗತಿ ವಿದ್ಯಾರ್ಥಿನಿ ಭಾಗ್ಯ, ಆಹಾರ ಮತ್ತು ಕ್ಷೀರ ಯೋಜನೆ ಸಚಿವರಾಗಿ 8 ನೇ ತರಗತಿಯ ಅಭಿಷೇಕ, ಆರೋಗ್ಯ ಮತ್ತು ಸ್ವಚ್ಚತೆ ಸಚಿವರಾಗಿ 9 ನೇ ತರಗತಿಯ ಛಾಯಾ, ಕ್ರೀಡಾ ಸಚಿವರಾಗಿ 9 ನೇ ತರಗತಿಯ ಜ್ಞಾನಸಾಗರ, ಕೃಷಿ ಮತ್ತು ತೋಟಗಾರಿಕೆ ಸಚಿವರಾಗಿ 9ನೇ ತರಗತಿಯ ಅಭಿಷೇಕ, ಶಿಕ್ಷಣ ಸಚಿವರಾಗಿ 10 ನೇ ತರಗತಿಯ ಕುಸುಮ, ಅರಣ್ಯ ಮತ್ತು ಪರಿಸರ ಸಚಿವರಾಗಿ 8 ನೇ ತರಗತಿಯ ಮನು, ಸಾಂಸ್ಕøತಿಕ ಸಚಿವರಾಗಿ 10 ನೇ ತರಗತಿಯ ಚೈತನ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ 8 ನೇ ತರಗತಿಯ ಅರ್ಚನಾ ಅವರನ್ನು ಆಯ್ಕೆ ಮಾಡಿದ ನಂತರ ಅಧಿಕಾರದ ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಲಾಯಿತು.

      ಶಾಲಾ ಸಂಸತ್ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಯಲು ಮುಖ್ಯ ಶಿಕ್ಷಕ ಆರ್.ರುದ್ರೇಶ್, ಅಧ್ಯಾಪಕರುಗಳಾದ ಗಿರಿರಾಜು, ನಟರಾಜು, ಮಹಾಲಿಂಗಯ್ಯ, ರಮೇಶ್, ಸಂಜೀವಯ್ಯ, ಪ್ರಸನ್ನ, ಸಿ.ಚೇತನ, ಜಯಶ್ರೀಯಂಡಿಗೇರಿ, ಜಹೀರ್ ಅಹಮದ್ ಸಹಕರಿಸಿದರು.

 

LEAVE A REPLY

Please enter your comment!
Please enter your name here