ನೇತ್ರದಾನ ಕುರಿತು ಅರಿವು ಆಂದೋಲನ ಕಾರ್ಯಕ್ರಮ

0
17

ತುಮಕೂರು :

               ನೇತ್ರದಾನ ಪಾಕ್ಷಿಕದ ಅಂಗವಾಗಿ ನೇತ್ರದಾನದ ಕುರಿತು ಅರಿವು ಆಂದೋಲನ ಕಾರ್ಯಕ್ರಮವನ್ನು ಎನ್.ಎಸ್.ಐ. ಫೌಂಡೇಷನ್, ತುಮಕೂರು, ತುಮಕೂರು ಜಿಲ್ಲಾ ನೇತ್ರತಜ್ಞರ ಸಂಘ, ತುಮಕೂರು, ಲಯನ್ಸ್ ಅಂತರಾಷ್ಟ್ರೀಯ ಕಣ್ಣಿನ ಆಸ್ಪತ್ರೆ, ಬೆಂಗಳೂರು ಮತ್ತು ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಲಿ., ತುಮಕೂರು, ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 10-09-2018 ಸೋಮವಾರ ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಆಸ್ಪತ್ರೆ ಸಭಾಂಗಣ, ತುಮಕೂರು ಇಲ್ಲಿ ಆಯೋಜಿಸಲಾಗಿದೆ.
ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಲಿ., ಅಧ್ಯಕ್ಷರಾದ ಎನ್.ಎಸ್. ಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.                           ತುಮಕೂರು ನಗರದ ಶಾಸಕರಾದ ಮಾನ್ಯಶ್ರೀ ಜಿ.ಬಿ. ಜ್ಯೋತಿಗಣೇಶ್‍ರವರು ಉದ್ಘಾಟಿಸಲಿದ್ದಾರೆ. ತುಮಕೂರು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಟಿ.ಎ. ವೀರಭದ್ರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಬಿ.ಆರ್. ಚಂದ್ರಿಕ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಕಾರ್ಯಕ್ರಮಾಧಿಕಾರಿಗಳಾದ ಡಾ. ಚೇತನ್ ಎಂ., ತುಮಕೂರು ಜಿಲ್ಲಾ ನೇತ್ರತಜ್ಞರ ಸಂಘದ ಅಧ್ಯಕ್ಷರಾದ ಡಾ. ಕೆ.ಪಿ. ಕಲ್ಲೇಶ್ವರ್, ಬೆಂಗಳೂರಿನ ಲಯನ್ಸ್ ಕಣ್ಣಿನ ಆಸ್ಪತ್ರೆಯ ಡಾ. ರೇಖಾ ಜ್ಞಾನಚಂದ್ರ, ತುಮಕೂರು ನೇತ್ರಾಧಿಕಾರಿಗಳ ಸಂಘದ ಕೃಷ್ಣಮೂರ್ತಿರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here