ಅರ್ಜುನ್ ರಾಂಪಾಲ್, ಮೆಹರ್ ಜೆಸಿಯಾ 20 ವರ್ಷದ ದಾಂಪತ್ಯ ಜೀವನ ಅಂತ್ಯ,ಪ್ರತ್ಯೇಕತೆ ಘೋಷಣೆ

0
25

 

ಮುಂಬೈ:

ಬಾಲಿವುಡ್ ನಟ ಅರ್ಜನ್ ರಾಂಪಾಲ್  ಮತ್ತು ಮಾಜಿ ಸೂಪರ್ ಮಾಡೆಲ್ ಮೆಹರ್ ಜೆಸಿಯಾ 20 ವರ್ಷದ ದಾಂಪತ್ಯ ಜೀವನ ಮುರಿದು ಬಿದ್ದಿದೆ.  ಇವರಿಬ್ಬರು ಬೇರ್ಪಟ್ಟಿರುವ ವಿಚಾರವನ್ನು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

        ಮಾಜಿ ದಂಪತಿಗಳು ಇಂದಿನಿಂದ ಪ್ರತ್ಯೇಕವಾಗಿ  ವಾಸಿಸುವುದಾಗಿ  ಹೇಳಿದ್ದಾರೆ.  ಆದರೆ ಅವರ ಹೆಣ್ಣುಮಕ್ಕಳಾದ ಮಿಕಿಕ (16) ಮತ್ತು ಮೈರಾ (13) ಗೆ ಕುಟುಂಬವಾಗಿ  ಒಟ್ಟಾಗಿ ಸೇರಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ.  ವಾರಗಳ ನಂತರ ಅವುಗಳು ಸಹ  ವಿಭಜನೆಯಾಗಲಿದೆ ಎಂದು ಊಹಿಸಲಾಗಿದೆ.

         ಪ್ರೀತಿ ಮತ್ತು ಸುಂದರವಾದ ನೆನಪುಗಳನ್ನು ತುಂಬಿದ 20 ವರ್ಷಗಳ ಸುದೀರ್ಘ ಪ್ರಯಾಣದ ನಂತರ, ನಾವು ಪ್ರತ್ಯೇಕವಾಗಿ ವಾಸಿಸಲು  ಬಯಸುತ್ತೇವೆ, ಎಲ್ಲಾ ಪ್ರಯಾಣಗಳು ವಿಭಿನ್ನ ಮಾರ್ಗಗಳನ್ನು ಹೊಂದಿವೆ ಮತ್ತು ನಾವು ಇದೀಗ ವಿವಿಧ ಸ್ಥಳಗಳಿಗೆ ತೆರಳಲು ಸಮಯವೆಂದು ಬಾವಿಸುವುದಾಗಿ ಅವರು ಹೇಳಿದ್ದಾರೆ.

         ನಾವು ಯಾವಾಗಲೂ ಘನತೆಯನ್ನು ಕಾಪಾಡಿಕೊಂಡಿದ್ದು, ಹೊಸ ಬದುಕಿನಲ್ಲೂ  ಪರಸ್ಪರ ಘನತೆ ಕಾಯ್ದುಕೊಳ್ಳುತ್ತೇವೆ.  ಈ ಮಾತು ಹೇಳುವಾಗಿ ಖಾಸಗಿ ವ್ಯಕ್ತಿಗಳೆಂಬ ಭಾವ ಬರುತ್ತಿದೆ. ಆದರೆ, ಸತ್ಯವೂ ವಿಕೃತವಾಗಬಹುದು, ಕಳೆದುಹೋಗಬಹುದೆಂದು 45 ವರ್ಷದ ರಾಂಪಾಲ್ ಹಾಗೂ 47 ವರ್ಷದ ಜೆಸಿಯಾ  ಹೇಳಿದ್ದಾರೆ.

          ನಾವು ಒಂದು ಕುಟುಂಬ, ಪರಸ್ಪರರ  ಪ್ರೀತಿಯು ಶಾಶ್ವತವಾಗಿಯೇ ಇರುತ್ತದೆ ಮತ್ತು ನಾವು ಯಾವಾಗಲೂ ಮುಖ್ಯವಾಗಿ ನಮ್ಮ ಮಕ್ಕಳಿಗಾಗಿ ಮಹಾಕಾ ಮತ್ತು ಮೈರಾಗೆ ಇರುವೆವು ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಖಾಸಗಿ ಬದುಕು ಇಷ್ಟಪಟಿದ್ದು, ಮುಂದಿನ ಬೆಳವಣಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

          ಈ ಮಾಜಿ ದಂಪತಿಗಳು ತಮ್ಮದೇ ಆದ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದು, 2006ರಲ್ಲಿ ಈ ಸಂಸ್ಥೆ ನಿರ್ಮಿಸಿದ್ದ  ಐ ಸಿ ಯೂ ಸಿನಿಮಾದಲ್ಲಿ ಅರ್ಜನ್ ರಾಂಪಾಲ್ ಅಭಿನಯಿಸಿದ್ದರು.

LEAVE A REPLY

Please enter your comment!
Please enter your name here