ಅರ್ಥಶಾಸ್ತ್ರಜ್ಞ ಪ್ರೊ: ಬಿ.ಶೇಷಾದ್ರಿ ನಿಧನ

0
63

ಬಳ್ಳಾರಿ:

     ಖ್ಯಾತ ‌ಅರ್ಥಶಾಸ್ತ್ರಜ್ಞ ಪ್ರೊ‌.ಬಿ.ಶೇಷಾದ್ರಿ(81) ಅವರು ಗುರುವಾರ ರಾತ್ರಿ ನಗರದ ‌ತಮ್ಮ ಮನೆಯಲ್ಲಿ‌ ನಿಧನರಾಗಿದ್ದಾರೆ.

     ರಾಜ್ಯದಲ್ಲಿ ಹೈದರಾಬಾದ್ ‌ಕರ್ನಾಟಕ‌ ಪ್ರದೇಶಾಭಿವೃದ್ಧಿ ಮಂಡಳಿ‌ ಸ್ಥಾಪನೆಯಾಗಲು ‌ಇವರ‌ ಪ್ರಯತ್ನವೂ ಕಾರಣ. ಪ್ರಾದೇಶಿಕ ಅಸಮತೋಲನ‌ ನಿವಾರಣೆ ಕುರಿತು‌ ತಮ್ಮ ದನಿಯನ್ನು‌ ಕೊನೆಯ ಉಸಿರಿನವರೆಗೂ ಅವರು ಕಾಯ್ದುಕೊಂಡಿದ್ದರು. 

      ಪತ್ನಿ‌ ಪದ್ಮಾವತಿ, ಮೂವರು‌ ಪುತ್ರರು ಹಾಗೂ ಒಬ್ಬ ‌ಪುತ್ರಿಯನ್ನು ಅಗಲಿರುವ ಶೇಷಾದ್ರಿ ಅವರು, ಹಲವು‌ ವರ್ಷದಿಂದ ಕ್ಯಾನ್ಸರ್‌ನಿಂದ‌ ಬಳಲುತ್ತಿದ್ದರು ಎನ್ನಲಾಗಿದೆ. ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದೆ ಎಂದು ಕಟುಂಬದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here