ಬಾಳ ಪಯಣದಲಿ ಕೈ ಹಿಡಿದ ನನ್ನಾಕೆ
ಬಾಳಿಗೆ ಚೆಲುವನು ತಂದವಳು
ಹೃದಯಕೆ ಒಲವನು ತುಂಬಿದವಳು
ಬಳಲಿದ ತನುವಿಗೆ ತಂಗಾಳಿ ಬೀಸಿದವಳು
ಹಿತವಾಗಿ ಜೊತೆಯಾಗಿ ನನ್ನೊಡನೆ ಸಾಗಿದಾಕೆ
ಹೃನ್ಮಂದಿರದಿ ಸ್ನೇಹ ಸೌರಭ ಚೆಲ್ಲಿದವಳು
ಒಲುಮೆಯ ರಸದೂಟ ನೀಡಿದವಳು
ಜೀವನಕೆ ಸ್ಫೂರ್ತಿಯ ತುಂಬಿದವಳು
ದೇವನೊಲುಮೆಯಿಂದೆನಗೆ ದೊರೆತಾಕೆ
ಬಾಳ ಜೋಕಾಲಿಯಲಿ ಜೊತೆಯಾಗಿ ಜೀಕಿದವಳು
ಬಾಳಿನ ಬಿಸಿಲಿನಲಿ ಹೊಳೆವ ಬೆಳದಿಂಗಳಾದವಳು
ಎನ್ನೊಡನೆ ಸಮರಸದಿ ಸಾಗಿದವಳು
– ವೈ.ಎಸ್.ಹನುಮಂತಯ್ಯ ಎಡೆಯೂರು.