ಅವಧಿ ಮೀರಿದ ಮದ್ಯವನ್ನು ನಾಶ ಪಡಿಸಿದ ಅಬಕಾರಿ ಅಧಿಕಾರಿಗಳು

0
15

ಹರಿಹರ:

    ನಗರದ ಕೆಎಸ್‍ಬಿಸಿಎಲ್ ಗೋದಾಮಿನಲ್ಲಿ ಅವಧಿ ಮೀರಿದ ಹಾಗೂ ಮಾನವ ಸೇವನೆಗೆ ಯೋಗ್ಯವಲ್ಲದ ಮದ್ಯ ದಾಸ್ತಾನನ್ನು ನಾಶಪಡಿಸಲಾಯಿತು.

      ವಿವಿಧ ಕಂಪನಿಯ ಬಿಯರ್ ತಯಾರಿಕೆಯಾಗಿ ಮಾರಾಟಕ್ಕೆ ನಿಗದಿತ 6 ತಿಂಗಳ ಅವಧಿ ಮುಗಿದ ಕಾರಣ ಸಂಗ್ರಹಿಸಿಡಲಾಗಿದ್ದ ಒಟ್ಟು 73 ಪೆಟ್ಟಿಗೆ ಹಾಗೂ 25 ಬಾಟಲಿ ಮದ್ಯವನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸುರಿದು ನಾಶಪಡಿಸಲಾಯಿತು.

      ಅಬಕಾರಿ ಉಪಾಧೀಕ್ಷಕ ಚಿಕ್ಕರೆಡ್ಡಿ, ಇನ್ಸಪೆಕ್ಟರ್‍ಗಳಾದ ಪರಶುರಾಮ್ ಪೀಡಕರ, ಕರಿಬಸಪ್ಪ, ಮುರುಡೇಶ್, ಡಿಪೋ ವ್ಯವಸ್ಥಾಪಕ ಪರಶುರಾಮ್ ಮತ್ತಿತರರಿದ್ದರು. ನಗರದ ಎಪಿಎಂಸಿ ಯಾರ್ಡ್‍ನಲ್ಲಿರುವ ಕೆಎಸ್‍ಬಿಸಿಎಲ್‍ನಿಂದ ಜಿಲ್ಲೆಯ ಹರಿಹರ, ಹರಪನಹಳ್ಳಿ, ಹೊನ್ನಾಳಿ ಹಾಗೂ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿಗೆ ಮದ್ಯ ಪೂರೈಸಲಾಗುತ್ತಿದೆ. 

LEAVE A REPLY

Please enter your comment!
Please enter your name here