ಆಗಸ್ಟ್ 1 ರಿಂದ ವೋಲ್ವೋ ಬಸ್ ಗಳ ಬಾಡಿಗೆ ದರ ಇಳಿಕೆ

0
28

 ಬೆಂಗಳೂರು:

      ಸಾಂದರ್ಭಿಕ ಒಪ್ಪಂದದ ಆಧಾರದ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಒದಗಿಸುವ ಹವಾನಿಯಂತ್ರಿತ ವೋಲ್ವೊ ಬಸ್ ಗಳ ಬಾಡಿಗೆ ದರವನ್ನು ಇಳಿಕೆಯಾಗಲಿದ್ದು, ಆ. 1ರಿಂದ ರಿಂದ ಪರಿಷ್ಕೃತ ದರವು ಜಾರಿಗೆ ಬರಲಿದೆ.
      ವೋಲ್ವೊ ಬಸ್ ಗಳ ದರವು ಹೆಚ್ಚಿರುವ ಹಿನ್ನೆಲೆಯಲ್ಲಿ ಜನರು ಬಾಡಿಗೆಗೆ ಪಡೆಯಲು ಮುಂದೆ ಬರುತ್ತಿರಲಿಲ್ಲ. ಹೀಗಾಗಿ, ದರಗಳನ್ನು ಕಡಿಮೆ ಮಾಡಲಾಗಿದೆ. ಆ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಲು ಸಂಸ್ಥೆಯು ಉದ್ದೇಶಿಸಿದೆ.

      ವೋಲ್ವೊ ಬಸ್ ಗಳನ್ನು ಮದುವೆ, ಪ್ರವಾಸ ಇನ್ನಿತರೆ ಉದ್ದೇಶಗಳಿಗಾಗಿ ಬಾಡಿಗೆಗೆ ಪಡೆಯುವುದನ್ನು ಪ್ರೋತ್ಸಾಹಿಸುವ  ಸಲುವಾಗಿ ಪ್ರತಿ ಕಿ.ಮೀ.ಗೆ 7 ರಿಂದ 12 ರೂ. ದರ ಕಡಿಮೆ ಮಾಡಿದೆ. ಹಾಗೆಯೇ, ಕಿ.ಮೀ ಮಿತಿಯನ್ನು ಸಹ ಕಡಿತಗೊಳಿಸಿದೆ. ವೋಲ್ವೊ ವಾಹನಗಳ ಬಾಡಿಗೆ ದರಗಳನ್ನು ಕಡಿಮೆ ಮಾಡಿ, ವಾರದ ದಿನಗಳು ಮತ್ತು ವಾರಾಂತ್ಯ ದಿನಗಳಲ್ಲಿ ಪ್ರತ್ಯೇಕ ದರಗಳನ್ನು ವಿಧಿಸಲು ತೀರ್ಮಾನಿಸಲಾಗಿದೆ.

LEAVE A REPLY

Please enter your comment!
Please enter your name here