ಆರೋಗ್ಯ ಕಾರ್ಡ್ ನೋಂದಣಿ ಅವಧಿ ವಿಸ್ತರಣೆ

0
45

ಹೊನ್ನಾಳಿ:

      ಬಹು ಜನರ ಬೇಡಿಕೆಯ ಮೇರೆಗೆ ಮಣಿಪಾಲ ಆರೋಗ್ಯ ಕಾರ್ಡ ನೋಂದಾವಣೆ ದಿನಾಂಕವನ್ನು ಆಗಸ್ಟ್ 15ರವರೆಗೆ ವಿಸ್ತರಿಸಿದ್ದು, ಹೊನ್ನಾಳಿಯಲ್ಲಿ ಆಗಸ್ಟ್ 4 ರ ಶನಿವಾರದಿಂದ ಅಗಸ್ಟ್ 6ರ ಸೋಮವಾರದವರೆಗೆ ಕಾರ್ಡ ನೋಂದಾವಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಣಿಪಾಲ್ ಕೆ.ಎಂ.ಸಿ.ಯ ಅಧಿಕಾರಿ ಶ್ರೀನಿವಾಸ್ ಭಾಗವತ್ ಹೇಳಿದರು.

      ಅವರು ಗುರುವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಡ ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದ್ದು, ಕಾರ್ಡದಾರರು ವೈದ್ಯರ ಸಮಾಲೋಚನ ಫೀಯಲ್ಲಿ ಶೇಕಡ 50ರಷ್ಟು ರಿಯಾಯಿತಿ ಪಡೆಯಲಿದ್ದು ಪ್ರಯೋಗಾಲಯ, ಸಿ.ಟಿ., ಎಂ.ಆರ್.ಐ. ಆಲ್ಟ್ರಾಸೌಂಡ್ , ಹೊರರೋಗಿ ವಿಧಾನಗಳಲ್ಲಿ ಶೇಕಡ 25 ಮತ್ತು ಔಷಧಾಲಯಗಳಲ್ಲಿ ಒಟ್ಟಿ ಬಿಲ್ಲಿಗೆ ಶೇಕಡ 10ರಷ್ಟು ರಿಯಾಯಾತಿ ಸೌಲಭ್ಯ ಸಿಗಲಿದೆ ಎಂದು ವಿವರಿಸಿದರು.

      ಮಣಿಪಾಲ ಆರೋಗ್ಯ ಕಾರ್ಡ ಯಾವುದೇ ರೀತಿಯ ಚಿಕಿತ್ಸೆಗಳಿಗೆ ಎಷ್ಟು ಸಲ ಬೇಕಾದರು ಬಳಸಬಹುದು,ಮತ್ತು ಇದು ಮೋದಲೇ ಅಸ್ತಿತ್ವದಲ್ಲಿರುವ ರೋಗಗಳಿಗೆ ಅನ್ಯಯಿಸುತ್ತದೆ ಏಡ್ಸ್ ಕ್ಷಯ, ಮನೋವೈದ್ಯಕೀಯ ಕಾಯಿಲೆಗಳಂತಹ ರೋಗಗಳ ಚಿಕಿತ್ಸೆಗಳಿಗೆ ಕೂಡ ಬಳಸಬಹುದಾಗಿದೆ ಎಂದು ತಿಳಿಸಿದರು.ಹೆಚ್ಚಿನ ಮಾಹಿತಿಗೆ ಮಣಿಪಾಲ ಆರೋಗ್ಯ ಕಾರ್ಡ ಅಧಿಕೃತ ಪ್ರತಿನಿಧಿಗಳು ಕೆ.ಬಿ. ಕೆಂಚನಗೌಡ ದೂರವಾಣಿ ಸಂಖ್ಯೆ 9731709177 ಕೊಟೆ ಸತ್ಯನಾರಯಣ ರಾವ್, 9009734185,ಬಿ.ಎಂ.ಪರಮೇಶ್ವರಪ್ಪ, 9448139563, ಸವಳಂಗ ಶಿವಮೂರ್ತಿ 9880794798. ಇವರನ್ನು ಸಂಪರ್ಕಿಸಬಹುದಾಗಿದೆ ಎಂದ ಅವರು ಆಗಸ್ಟ್ 4 ರಿಂದ 3 ದಿನಗಳ ಕಾಲ ಹೊನ್ನಾಳಿಯ ಮಿನಿ ವಿಧಾನ ಸೌಧದ ಬಳಿ ನೋಂದಾವಣೆ ಕಾರ್ಯಕ್ರಮ ನಡೆಸಲಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಣಿಪಾಲ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕ ಸಚಿನ್‍ಕಾರಂತ್ ಪ್ರತಿನಿಧಿ ಕೆ.ಬಿ. ಕೆಂಚನಗೌಡ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೃತ್ಯುಂಜಯ ಪಾಟೀಲ್ ಅವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here