ಆರ್‍ಸಿಸಿ ತಂಡದ ಆಟಗಾರರು ನಗರಸಭಾ ಸದಸ್ಯರಾಗಿ ಆಯ್ಕೆ : ತಂಡದಿಂದ ಸನ್ಮಾನ

0
31

ಚಳ್ಳಕೆರೆ

             ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ಆರ್‍ಸಿಸಿ ಬಾಯ್ಸ್ ಕ್ರಿಕೆಟ್ ತಂಡ ಕ್ರಿಕೆಟ್ ಆಟವನ್ನು ಆಡುತ್ತಿದ್ದು, ನಗರ ಹಾಗೂ ತಾಲ್ಲೂಕು ಮಟ್ಟದಲ್ಲಿ ಹಲವಾರು ಪಂದ್ಯಗಳಲ್ಲಿ ಜಯಗಳಿಸಿದೆ. ಇಂದಿಗೂ ಸಹ ಈ ತಂಡದ ಆಟಗಾರರು ರಾಜ್ಯ,, ಜಿಲ್ಲೆ, ತಾಲ್ಲೂಕು ಮಟ್ಟದ ಪಂದ್ಯಾವಳಿಗಳನ್ನು ಆಡುವ ಮೂಲಕ ಈ ತಂಡವನ್ನು ಉತ್ತಮ ತಂಡವಾಗಿ ರೂಪಿಸಿದ್ಧಾರೆ.
            ತಂಡದ ಮುಖ್ಯಸ್ಥ ಸತೀಶ್ ಈ ಬಗ್ಗೆ ಮಾತನಾಡಿ, ನಮ್ಮ ತಂಡದಲ್ಲಿ ಹಲವಾರು ವರ್ಷಗಳ ಕಾಲ ಕ್ರಿಕೆಟ್ ಆಟವಾಡಿ ಹಲವಾರು ಪಂದ್ಯಗಳಲ್ಲಿ ಜಯಸಾಧಿಸಲು ಕಾರಣಕರ್ತರಾದ ಉತ್ತಮ ಯುವ ಆಟಗಾರರಾದ ಸಿ.ಎಂ.ವಿಶುಕುಮಾರ್, ಎಚ್.ಪ್ರಶಾಂತ್‍ಕುಮಾರ್(ಪಚ್ಚಿ) ಇವರು ನಗರಸಭಾ ಸದಸ್ಯರಾಗಿದ್ದು, ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ತಂಡದ ಇಬ್ಬರೂ ಆಟಗಾರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
             ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಸ್ಯ ಸಿ.ಎಂ.ವಿಶುಕುಮಾರ್, ಆರ್‍ಸಿಸಿ ಬಾಯ್ಸ್ ಕ್ರಿಕೆಟ್ ತಂಡದ ಆಟಗಾರನಾಗಿ ಗುರುತಿಸಿಕೊಳ್ಳುವುದಕ್ಕೆ ಸಂತಸವಾಗಿದೆ. ನಾನು ಮಾಡಿದ ಅಲ್ಪ ಸೇವೆಯನ್ನು ಪರಿಗಣಿಸಿ ಇಡೀ ತಂಡ ಸನ್ಮಾನವನ್ನು ನೀಡಿದೆ. ನಗರಸಭಾ ಸದಸ್ಯನಾಗಿ ನಾನು ಈ ತಂಡದ ಬೆಳವಣಿಗೆಗೆ ಉತ್ತಮ ಸಹಕಾರ ನೀಡುವ ಭರವಸೆ ನೀಡಿದರು.
ಸದಸ್ಯ ಎಚ್.ಪ್ರಶಾಂತ್‍ಕುಮಾರ್(ಪಚ್ಚಿ) ಮಾತನಾಡಿ, ತಂಡದ ಆಟಗಾರನಾಗಿ ತಂಡವನ್ನು ಮುನ್ನಡೆಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದೆ. ನಾನು ಚುನಾವಣೆಯಲ್ಲಿ ನಿಲ್ಲಲ್ಲು ಈ ತಂಡವೇ ಸ್ಪೂರ್ತಿಯಾಗಿತ್ತು. ಚುನಾವಣೆಯಲ್ಲೂ ಸಹ ತಂಡದ ಹಲವಾರು ಆಟಗಾರರು ನನಗೆ ನೆರವಾಗಿದ್ದಾರೆ. ಸದಸ್ಯನಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಸಹ ನಮ್ಮ ತಂಡವನ್ನು ಮತ್ತಷ್ಟು ಶಕ್ತಿ ಶಾಲಿಯಾಗಿ ಸಂಘಟಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆದರ್ಶ, ಬಾಲಾಜಿ, ಏಕಾಂತನಾಯಕ, ವಿ.ಎಂ.ಮಂಜುನಾಥ, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here