ಆಶಾ ಕಾರ್ಯಕರ್ತೆಯರನ್ನು ಗೌರವಯುತವಾಗಿ ನಡೆಸಿಕೊಳ್ಳಲಿ

0
79

ಕೊರಟಗೆರೆ

   ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‍ಗೆ ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಬುಧವಾರ ಕೊರಟಗೆರೆ ನಗರದಲ್ಲಿ ಕೊರಟಗೆರೆ ತಾಲ್ಲೂಕು ಸಮಾವೇಶವನ್ನು ನಡೆಸಲಾಯಿತು. ಸಮಾವೇಶದಲ್ಲಿ ಕೊರಟಗೆರೆ ತಾಲ್ಲೂಕಿನ ಆಶಾ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳಾದ, ತಮಗೆ ಸಮಾಜವು ಗೌರವ ನೀಡುತ್ತಿಲ್ಲ, ತಮ್ಮ ಕುಟುಂಬದವರಿಗೆ ಆರೋಗ್ಯ ಸೌಕರ್ಯ ಒದಗಿಸಬೇಕು. ಸಾರಿಗೆ-ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು, ಉನ್ನತ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರುತ್ತಾರೆ, ಸಂಬಳ ಸರಿಯಾಗಿ ಪಾವತಿಸುತ್ತಿಲ್ಲ ಎಂಬುದಾಗಿ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು.

      ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‍ನ ಜಿಲ್ಲಾ ಸಂಘಟನಾಕಾರರಾದ ಎಸ್.ಎನ್.ಸ್ವಾಮಿಯವರು ಮಾತನಾಡಿ, ಎಲ್ಲ ಸಮಸ್ಯೆಗಳನ್ನು ನಾವು ಹೋರಾಟದಿಂದ ಮಾತ್ರ ಬಗೆಹರಿಸಲು ಸಾಧ್ಯ, ಆಶಾ ಕಾರ್ಯಕರ್ತೆಯರು ಹೋರಾಟದ ಹಾದಿಯನ್ನು ಮುಂದುವರೆಸುವ ನಿಟ್ಟಿನಲ್ಲಿ ಈ ಸಮಾವೇಶ ಹೆಚ್ಚು ಪೂರಕವಾಗಿದೆ. ಇಂದು ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕಾರ್ಯಗಳಷ್ಟೇ ಅಲ್ಲದೇ ಇನ್ನಿತರೆ ಹಲವು ಸಮೀಕ್ಷೆ, ಚುನಾವಣಾ ಕಾರ್ಯ, ಜಾಥಾ ಹೀಗೆ ಹಲವು ಕಾರ್ಯಗಳನ್ನು ಹಗಲು ರಾತ್ರಿ ಮಾಡುತ್ತಿದ್ದಾರೆ. ಆದರೆ ಶ್ರಮಕ್ಕೆ ತಕ್ಕ ಸಂಬಳ, ಗೌರವ,

      ಜೀವನ ಭದ್ರತೆ ಆಶಾಗಳಿಗೆ ದೊರೆಯುತ್ತಿಲ್ಲ. ಆಶಾಗಳಿಗೆ ಸಂಬಳ ಮಾಸಿಕ ರೂ 3500. ಕೊಡುತ್ತಾರೆ. ಆದರೆ ಅವರಿಗೆ ಈ ವೇತನ ನೀಡುತ್ತಿರುವುದೇ ದೊಡ್ಡ ಶಾಪವಾಗಿದೆ ಏಕೆಂದರೆ ಪುಡಿಗಾಸನ್ನು ನೀಡಿ ಅವರಿಂದ ಹೆಚ್ಚು ಹೆಚ್ಚು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಆದರೆ ಇನ್ನೊಂದು ಕಡೆ ವಿಜಯ್ ಮಲ್ಯ, ನೀರವ್ ಮೋದಿ, ಅಂಬಾನಿ, ಅದಾನಿ ಅಂತವರು ಮಾಡಿದ ಸಾವಿರಾರು ಕೋಟಿ ಸಾಲವನ್ನು ವಸೂಲು ಮಾಡದೇ ಕುಳಿತಿರುವ ಸರ್ಕಾರಗಳು, ದೇಶದ ಜನರ ಆರೋಗ್ಯ ಕಾಪಾಡುವ ಆಶಾಗಳಿಗೆ ಸಂಬಳ ಹೆಚ್ಚು ಮಾಡಲು ಮೀನಾಮೇಷ ಎಣಿಸುತ್ತವೆ. ಆಶಾಗಳು ಕಾರ್ಮಿಕರಾಗಿ ಈ ಸಮಾಜದ ಹೆಣ್ಣಾಗಿ ಶೋಷಣೆಗೆ ಒಳಗಾದವರು. ಈ ಶೋಷಣೆಯನ್ನು ತೊಡೆದು ಹಾಕಲು ಕಾರ್ಮಿಕರೆಲ್ಲ ಒಂದಾಗಲು ಸರಿಯಾದ ವಿಚಾರ ಬೇಕು. ಇಂದು ಆ ಹೋರಾಟದ ಸ್ಪೂರ್ತಿ ಮತ್ತು ವಿಚಾರವನ್ನು ಸಮಾಜವಾದಿ ನಾಡಿನಿಂದ ಮಾತ್ರ ಪಡೆಯಲು ಸಾಧ್ಯ.

      ಸೋವಿಯತ್ ರಷ್ಯಾ ಈ ಸಾಧನೆಯನ್ನು ಮಾಡಿ ತೋರಿಸಿದೆ. ಅದಕ್ಕೆ ಸಂಬಂಧಿಸಿದ ಪುಸ್ತಕಗಳು ಇವೆ. ಆಶಾ ತಾಯಂದಿರು ಅವುಗಳನ್ನು ಓದಬೇಕು ಎಂದು ತಿಳಿಸಿ, ಆಶಾ ಕಾರ್ಯಕರ್ತೆಯರ ತಾಲ್ಲೂಕಿನ ಸಮಸ್ಯೆಗಳನ್ನು ಕುರಿತು ತಾಲ್ಲೂಕಿನ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸೂಕ್ತ ಪರಿಹಾರ ಒದಗಿಸುವುದಾಗಿ ಹೇಳಿದರು. ಎ.ಐ.ಎಂ.ಎಸ್ ಜಿಲ್ಲಾ ಸಂಘಟನಕಾರರಾದ ಮಂಜುಳ ಗೊನವರ ಅವರು ಮಹಿಳೆಯರ ಹೋರಾಟ ಕುರಿತು ಮಾತನಾಡಿದರು.
ಸಮಾವೇಶದಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‍ನ ಸಂಘಟನಾಕಾರರುಗಳಾದ ಮಾದಪ್ಪಎಸ್.ಕೆ, ಚಂದನ್, ತೇಜಸ್ವಿನಿ, ಅಶ್ವಿನಿ ಟಿ.ಇ. ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here