ಇಂಜಿನಿಯರ್ಸ್ ಡೇ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಶ್ರೀ ಎಂ.ಎನ್.ಚನ್ನಬಸಪ್ಪ

0
920

ತುಮಕೂರು:
             ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಪ್ರಜಾಪ್ರಗತಿ ಒಂದು ವಿಶೇಷ ಸಂಚಿಕೆಯನ್ನು ಹೊರತಂದಿರುವುದು ಬಹಳ ಸಂತಸ ತಂದಿದೆ ಎಂದು ಸಿದ್ದಗಂಗಾ ಸಂಸ್ಥೆಯ ನಿರ್ದೇಶಕ ಎಂ.ಎನ್.ಚನ್ನಬಸಪ್ಪ ತಿಳಿಸಿದರು.
               ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ಡೇ ಪ್ರಯುಕ್ತ ತಾಂತ್ರಿಕ ಪ್ರಗತಿ ಎಂಬ ಹಸರಿನಲ್ಲಿ ವಿಶೇಷ ಸಂಚಿಕೆಯನ್ನು ಪ್ರಜಾಪ್ರಗತಿ ಕಚೇರಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸರ್.ಎಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಪ್ರಜಾಪ್ರಗತಿ ವಿಶೇಷ ಸಂಚಿಕೆಯನ್ನು ತಯಾರಿಸಿರುವುದು ಸಂತಸದ ವಿಷಯ. ಇದರಲ್ಲಿ ಜನರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನು ನೀಡಲಾಗಿದೆ. ಮನೆ ನಿರ್ಮಾಣ ಮಾಡಲು ಆರಂಭದಿಂದ ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ಮಾಹಿತಿಯನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ. ಈ ಸಂಚಿಕೆಯನ್ನು ಜನರು ಓದುವ ಮೂಲಕ ಸದುಪಯೋಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
                 ಸರ್.ಎಂ ವಿಶ್ವೇಶ್ವರಯ್ಯನವರು ಒಬ್ಬ ಇಂಜಿನಿಯರ್ ಆಗಿ, ಒಬ್ಬ ಮಿಷನರಿಯಾಗಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡಿದ್ದು ಆನಂತರ ಕರ್ನಾಟಕದ ಮೈಸೂರು ಭಾಗದಲ್ಲಿ ಬಂದು ಕೆಲಸ ಮಾಡಿ ಮೈಸೂರು ಜಿಲ್ಲೆಯನ್ನೇ ಬದಲಾವಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸರ್ಕಾರಿ ಇಂಜಿನಿಯರ್ ಹಾಗೂ ಖಾಸಗಿ ಇಂಜಿನಿಯರ್‍ಗಳು ವಿಶ್ವೇಶ್ವರಯ್ಯನವರು ಹುದ್ದೆಯನ್ನು ಉಳಿಸಿಕೊಳ್ಳಬೇಕು ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಹೇಳಿದರು.
                ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಪ್ರಜಾಪ್ರಗತಿ ಪತ್ರಿಕೆ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ್ದು,ಸೆಪ್ಟೆಂಬರ್ 15ನೇ ದಿನದಂದು ವಿಶ್ವೇಶ್ವರಯ್ಯನವರ ಜನ್ಮದಿನ ಹಾಗೂ ಇಂಜಿನಿಯರ್ಸ್ ಡೇ ಅಂಗವಾಗಿ ಪ್ರಜಾಪ್ರಗತಿ ದಿನಪತ್ರಿಕೆಯು ತಾಂತ್ರಿಕ ಪ್ರಗತಿ ಎಂಬ ವಿಶೇಷ ಸಂಚಿಕೆಯನ್ನು ರಚನೆ ಮಾಡಿದ್ದು, ಬಿಡುಗಡೆಗೊಳಿಸಿದ್ದಾರೆ. ಈ ತಾಂತ್ರಿಕ ಪ್ರಗತಿಯಲ್ಲಿ ಕಡಿಮೆ ಖರ್ಚಿನಲ್ಲಿ ಮನೆಯನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದು, ಇದನ್ನು ಜನರು ಓದುವುದರ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕೆಂದು ಇಂಜಿನಿಯರ್ ಅಸೋಸಿಯೇಷನ್‍ನ ರಾಮಮೂರ್ತಿ ತಿಳಿಸಿದರು.
                 ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ಡೇ ಪ್ರಯುಕ್ತ ಪ್ರಜಾಪ್ರಗತಿ ಪತ್ರಿಕೆಯು ಒಂದು ವಿಶೇಷ ಸಂಚಿಕೆಯನ್ನು ತಂದಿದೆ. ಸರ್.ಎಂ ವಿಶ್ವೇಶ್ವರಯ್ಯನವರು ಪ್ರಪಂಚ ಕಂಡ ಅದ್ಬುತ ಇಂಜಿನಿಯರ್ ಆಗಿದ್ದು, ಪ್ರಾಮಾಣಿಕರೂ, ದಕ್ಷರೂ ಆಗಿದ್ದರು. ಈಗಿನ ಇಂಜಿಯರ್‍ಗಳು ವಿಶ್ವೇಶ್ವರಯ್ಯನವರನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ಸಿದ್ದಗಂಗಾ ತಾಂತ್ರಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಶಿವಕುಮಾರಯ್ಯ ಹೇಳಿದರು.
                  ಪ್ರಜಾಪ್ರಗತಿ ದಿನಪತ್ರಿಕೆಯೂ ಡಾಕ್ಟರ್ಸ್ ಡೇಯಲ್ಲೂ ಕೂಡ ಇದೇ ರೀತಿಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ್ದು ಅದೇರೀತಿ ಇಂಜಿನಿಯರ್ಸ್ ಡೇಯಲ್ಲೂ ಸಹ ಮಾಡಿದ್ದಾರೆ. ಈ ತಾಂತ್ರಿಕ ಪ್ರಗತಿಯಲ್ಲಿ ಹೆಚ್ಚಾಗಿ ಇಂಜಿನಿಯರ್ಸ್‍ಗಳ ಬಗ್ಗೆ ತಿಳಿಸಲಾಗಿದೆ. ಇದರಲ್ಲಿ ಕಡಿಮೆ ಖರ್ಚಿನಲ್ಲಿ ಮನೆಯನ್ನು ಹೇಗೆ ನಿರ್ಮಿಸಬೇಕು ಎಂಬುದರ ಬಗ್ಗೆ ಮಾಹಿತಿಗಳನ್ನು ನೀಡಲಾಗಿದ್ದು, ಮನೆ ನಿರ್ಮಾಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂದು ಎಸ್‍ಎಸ್‍ಐಟಿ ಆಡಳಿತಾಧಿಕಾರಿ ವೈ.ಎಂ ರೆಡ್ಡಿ ಹೇಳಿದರು.
                 ಈ ಸಂದರ್ಭದಲ್ಲಿ ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕ ಎಸ್.ನಾಗಣ್ಣ, ಉಪಸಂಪಾದಕರಾದ ಮಧುಕರ್ ಟಿ.ಎನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here