ಇತಿಹಾಸ ಪ್ರಸಿದ್ದ ಗೌರಸಮುದ್ರ ಮಾರಮ್ಮದೇವಿ ಜಾತ್ರೆ

0
50

ಚಳ್ಳಕೆರೆ

             ನಾಡಿನ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ, ಬಯಲು ಸೀಮೆಯ ಬರಡು ನಾಡಿನ ಬುಡಕಟ್ಟು ಸಮುದಾಯದ ಸಂಪ್ರದಾಯ ಬದ್ದ ಗೌರಸಮುದ್ರ ಶ್ರೀಮಾರಮ್ಮ ದೇವಿ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ನಡೆಯಿತು. ರಾಜ್ಯದ ನಾನಾಕಡೆಯಿಂದ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದಿಂದಲೂ ಸಹ ಭಕ್ತರು ಆಗಮಿಸಿ ತಮ್ಮ ಆರಾಧ್ಯ ದೇವಿಗೆ ಭಕ್ತಯನ್ನು ಸಮರ್ಪಿಸಿದರು.
             ಕಳೆದ ನೂರಾರು ವರ್ಷಗಳಿಂದ ಈ ಜಾತ್ರೆಗೆ ವೈಭವಪೂರಿತವಾಗಿ ನಡೆಯುತ್ತಿದ್ದು, ಹೆಚ್ಚಾಗಿ ಚಳ್ಳಕೆರೆ ಮೊಳಕಾಲ್ಮೂರು, ಜಗಲೂರು ತಾಲ್ಲೂಕುಗಳ ಬುಡಕಟ್ಟು ಸಮುದಾಯದ ಭಕ್ತರು ಈ ದೇವಿಯ ಒಕ್ಕಲಿಗೆ ಸೇರಿದ್ದಾರೆ. ಎಂತಹ ಸಂದರ್ಭದಲ್ಲೂ ಸಹ ಇವರು ಪ್ರತಿವರ್ಷ ನಡೆಯುವ ಈ ಜಾತ್ರೆಗೆ ತಪ್ಪದೆ ಹಾಜರಾಗುತ್ತಾರೆ. ವಿಶೇಷವೆಂದರೆ ಇಂತಹ ಆಧುನಿಕ ಕಾಲದಲ್ಲೂ ಸಹ ಭಕ್ತರು ಪರಂಪರೆಯಂತೆ ಎತ್ತಿನ ಗಾಡಿಗಳಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ನಂತರ ತುಮಲು ಪ್ರದೇಶಕ್ಕೂ ಭೇಟಿ ನೀಡಿ ಅಲ್ಲೂ ಸಹ ತಮ್ಮ ಭಕ್ತಿಯ ಜೊತೆಗೆ ಕಾಣಿಕೆಯನ್ನೂ ಸಹ ಸಲ್ಲಿಸುತ್ತಾರೆ.
             ಗ್ರಾಮದ ಮಾರಮ್ಮದೇವಿಯ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಸುಮಾರು 3 ಕಿ.ಮೀ ದೂರವಿರುವ ತುಮಲು ಪ್ರದೇಶಕ್ಕೆ ಮಂಗಳವಾದ್ಯಗಳ ಸಮೇತ ದೇವಿಯ ಉತ್ಸವ ಮೂರ್ತಿಯನ್ನು ಕರೆತರಲಾಗುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯ ಭಕ್ತರು ದೇವಿಗೆ ಜಯಕಾರ ಹಾಕುತ್ತಾ ಉತ್ಸವ ಮೂರ್ತಿಯನ್ನು ಹಿಂಬಾಲಿಸುತ್ತಾರೆ. ತುಮಲು ಪ್ರದೇಶಕ್ಕೆ ಬಂದ ಉತ್ಸವ ಮೂರ್ತಿಯನ್ನು ದೇವಸ್ಥಾನದ ಪೂಜಾರರು ಸಂಪ್ರದಾಯಗಳಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವರು. ಅದೇ ರೀತಿ ಪೂಜಾರ ವಂಶಸ್ಥರೇ ಗರಡುಗಂಭ ಮಿಂಚಿನಂತೆ ಏರಿ ಗರಡುಗಂಭದ ಮೇಲೆ ದೀಪ ಹಚ್ಚುತ್ತಾರೆ. ಈ ಸಂದರ್ಭದಲ್ಲಿ ಭಕ್ತರ ಜಯಕಾರ ಮುಗಿಲು ಮುಟ್ಟುತ್ತದೆ. ದೇವಿಯ ಉತ್ಸವದ ಮೂರ್ತಿಯ ಮೇಲೆ ಭಕ್ತರು ತಾವು ಬೆಳೆ ಈರುಳ್ಳಿ ಬೆಳೆ ಜೊತೆಗೆ ಹರಕೆಯಂತೆ ಕುರಿ ಮತ್ತು ಕೋಳಿ ಮರಿಗಳನ್ನು ಸಹ ಎಸೆಯುವ ವಾಡಿಕೆ ಇದೆ. ಅಷ್ಟೇಯಲ್ಲದೆ ರೈತರು ಸಹ ಈ ದೇವಿಗೆ ತಮ್ಮ ಜಾನುವಾರುಗಳ ಸಹಿತ ಪ್ರದಕ್ಷಣೆ ಹಾಕಿ ಜಾನುವಾರುಗಳಿಗೆ ಆರೋಗ್ಯ ಭಾಗ್ಯ ನೀಡುವಂತೆ ದೇವಿಯಲ್ಲಿ ಪ್ರಾರ್ಥಿಸುತ್ತಾರೆ.
                ಪ್ರತಿವರ್ಷ ತುಮಲು ಪ್ರದೇಶದಲ್ಲಿ ಮಿತಿಮೀರಿ ನೂಕುನುಗ್ಗಲು ಉಂಟಾಗಿ ಸರಗಳ್ಳತನ, ಮಕ್ಕಳ ಕಾಣೆಯಾಗುವುದು ಮುಂತಾದ ಘಟನೆಗಳು ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಈ ಬಾರಿ ಪೊಲೀಸ್ ಇಲಾಖೆ ನೂತನವಾಗಿ ಒಳ ಆವರಣದಲ್ಲಿ ನಿರ್ಮಿಸಿದ್ದ ಬ್ಯಾರಿಕೇಟ್ ಯಾವುದೇ ತೊಂದರೆ ಇಲ್ಲದಂತೆ ದೇವಿಯ ದರ್ಶನ ಪಡೆಯಲು ಅನುಕೂ¯ವಾಯಿತು. ಅದೇ ರೀತಿ ತೆಂಗಿನ ಕಾಯಿ ಹೊಡೆಯಲು ಸಹ ಎರಡೂ ಬದಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ಹೆಚ್ಚಿನ ಕಿರಿಕಿರಿಗೆ ಆಸ್ಪದವಾಗಲಿಲ್ಲ.
                ದೇವಸ್ಥಾನದಲ್ಲೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸರಥಿಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮಬಾಲರಾಜು, ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ, ಎಂ.ಜೋಶಿ ಉಪವಿಭಾಗಾಧಿಕಾರಿ ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಇ.ರಾಮರೆಡ್ಡಿ ಮುಂತಾದವರು ಆಗಮಿಸಿ ದೇವಿಯ ದರ್ಶನ ಪಡೆದರು
                ಪ್ರಾಣಿ ಬಲಿ ನಿಷೇದ :- ಜಿಲ್ಲಾ ಪೊಲೀಸ್ ಇಲಾಖೆ ಈ ಬಾರಿ ಜಾತ್ರಾ ಸಂದರ್ಭದಲ್ಲಿ ನಡೆಯುವ ಪ್ರಾಣಿ ಬಲಿಯನ್ನು ತಡೆಯಲು ವಿಶೇಷ ವ್ಯವಸ್ಥೆ ಮಾಡಿತ್ತು. ಎಲ್ಲೆಡೆ ಪ್ರಾಣಿ ಬಲಿ ಮಾಡದಂತೆ ನಾಮಫಲಕಗಳನ್ನು ಅಳವಡಿಸುವುದಲ್ಲದೆ, ದೇವಸ್ಥಾನ ಹಾಗೂ ಸುತ್ತಮುತ್ತಲ ತೋಟಗಳಲ್ಲಿ ಬಿಗಿಯಾದ ಪೊಲೀಸ್ ಪಹರೆಯನ್ನು ಏರ್ಪಡಿಸಿತ್ತು. ಜಿಲ್ಲಾ ರಕ್ಷಣಾಧಿಕಾರಿಗಳೇ ಖುದ್ಧಾಗಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಾಣಿ ಬಲಿಕೊಡದಂತೆ ಜಾತ್ರತೆ ವಹಿಸಿದರು. ದೇವಸ್ಥಾನದ ಸುತ್ತಲು ನಿರೀಕ್ಷೆಗೂ ಮೀರಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಂಚಾರ ವ್ಯವಸ್ಥೆ ಮತ್ತು ಸರಗಳ್ಳತನ ತಡೆಯಲು ಪೊಲೀಸರು ಹೆಚ್ಚಿನ ಮುತುವರ್ಜಿ ವಹಿಸಿದ್ದು, ಈ ಬಾರಿ ಹೆಚ್ಚಿನ ರೀತಿಯಲ್ಲಿ ಯಾವುದೇ ಸರಗಳ್ಳತನ ಪ್ರಕರಣ ವರದಿಯಾಗಲಿಲ್ಲ.
               ದೇವಸ್ಥಾನದ ಆವರಣ ಹಾಗೂ ತುಮಲು ಪ್ರದೇಶದ ಸುತ್ತಮುತ್ತ ಸಾವಿರಾರು ಸಂಖ್ಯೆ ಪೊಲೀಸರು ಜನರ ನಿಯಂತ್ರನದ ಜೊತೆಗೆ ವಾಹನ ಸಂಚಾರವನ್ನು ಸಹ ವ್ಯವಸ್ಥಿತವಾಗಿ ನಿಯಂತ್ರಿಸಿದರು. ಯಾವುದೇ ಸಂದರ್ಭದಲ್ಲಿ ಎಲ್ಲೂ ಸಹ ಸಂಚಾರಕ್ಕೆ ಅಡಚಣೆಯಾಗಲಿಲ್ಲ. ಕಳ್ಳಕಾರರ ಚಲನವಲನ ವೀಕ್ಷಣೆಗೆ ವಾಚಿಂಗ್ ಟವರ್ ಜೊತೆಗೆ ಸಿಸಿ ಕ್ಯಾಮರ ಅಳವಡಿಸಲಾಗಿತ್ತು. ಪಿಕ್‍ಪಾಕೇಟ್ ನಿಯಂತ್ರಣಗೊಂಡಿತ್ತು. ತಹಶೀಲ್ದಾರ್ ಟಿ.ಸಿ.ಕಾಂತರಾಜು, ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಇಲಾಖೆಯ ವಿವಿಧ ಅಧಿಕಾರಿಗಳ ಸಹಕಾರದೊಂದಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿದ್ದರು. ತಳಕು ಪಿಎಸ್‍ಐ ಶಿವಕುಮಾರ್, ಕೆ.ಸತೀಶ್‍ನಾಯ್ಕ, ಎನ್.ವೆಂಕಟೇಶ್, ಮೋಹನ್‍ಕುಮಾರ್, ಲೋಕೇಶ್ ಮುಂತಾದವರು ಬಂದೋಬಸ್ತ್ ಕಾರ್ಯದಲ್ಲಿ ನಿರತರಾಗಿದ್ದರು. ವಾಡಿಕೆಯಂತೆ ಶ್ರೀಮಾರಮ್ಮ ದೇವಿ ತುಮಲ ಪ್ರದೇಶದಲ್ಲಿ ಅಂದು ಸಂಜೆ ತನಕ ನೆಲೆಸಿ ಪುನಃ ಗ್ರಾಮದ ಗುಡಿ ಸೇರುತ್ತಾಳೆ. ಶ್ರೀದೇವಿಯ ಗುಡಿ ಸೇರಿದ ನಂತರ ಬೇರೆಯಾರೂ ಸಹ ತುಮಲು ಪ್ರದೇಶದಲ್ಲಿ ಓಡಾಡುವಂತಿಲ್ಲ. ಅದ್ದರಿಂದ ಸಂಜೆಯಾಗುತ್ತಿದ್ದಾಗಲೇ ಈ ಪ್ರದೇಶದ ಭಕ್ತರು ನಿರ್ಗಮಿಸುತ್ತಾರೆ. ಅಲ್ಲೇ ಇದ್ದರೆ ದೇವಿಯ ಅವಕೃಪೆಗೆ ಒಳಗಾಗುತ್ತೇವೆಂಬ ನಂಬಿಕೆಯಿಂದ ಅಲ್ಲಿ ಯಾರೂ ರಾತ್ರಿ ಇರುವುದಿಲ

LEAVE A REPLY

Please enter your comment!
Please enter your name here