ಇದು ಆಮ್ ಆದ್ಮಿ ಆಡಳಿತದ ದೆಹಲಿ ಸರ್ಕಾರಿ ಶಾಲೆಯ ಚಿತ್ರಣ

0
37

ನವದೆಹಲಿ:

      ದೆಹಲಿಯ ಆಮ್ ಆದ್ಮಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಖಾಸಗಿ ಶಾಲೆಗಳೇ ಸರ್ಕಾರಿ ಶಾಲೆಯನ್ನು ಅನುಸರಿಸುವಂತೆ ಮಾಡಿದೆ.

      ಹೌದು, ಅಚ್ಚರಿಯಾದರು ನಿಜ. ದೆಹಲಿ ಸರ್ಕಾರಿ ಶಾಲೆಯ ಈ ಫೋಟೋವನ್ನು ನೋಡಿ ಖಾಸಗಿ ಶಾಲೆಯ ಪ್ರಾಚಾರ್ಯರೊಬ್ಬರು ಹೊಸ ಕಲ್ಪನೆಯ ಈ ಡೆಸ್ಕ್ ಗಳನ್ನು ನಮ್ಮ ಶಾಲೆಗೂ ಖರೀದಿಸಬೇಕು. ಅದರ ಬಗ್ಗೆ ಮಾಹಿತಿ ಕೊಡಿ ಎಂದು ನಿನ್ನೆ ತಮಗೆ ಕರೆ ಮಾಡಿ ಕೇಳಿಕೊಂಡಿರುವುದಾಗಿ ದೆಹಲಿ ಸರ್ಕಾರದ ಸಲಹೆಗಾರ್ತಿ ಆತಿಶಿ ಮರ್ಲೆನಾ ಅವರು ಟ್ವೀಟ್ ಮಾಡಿದ್ದಾರೆ. ದೆಹಲಿಯಲ್ಲಿ ಕಳಪೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿದ ಖ್ಯಾತಿ ಮರ್ಲೆನಾ ಅವರದ್ದು.

LEAVE A REPLY

Please enter your comment!
Please enter your name here