ಇಬ್ಬರ ಬಂಧನ: ಮೊಬೈಲ್, ಬೈಕ್ ವಶ

0
8

ದಾವಣಗೆರೆ:

      ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಕಳ್ಳರನ್ನು ಬಂಧಿಸಿರುವ ಬಡಾವಣೆ ಪೊಲೀಸರು, ಬಂಧಿತರಿಂದ 19 ಸಾವಿರ ರೂ. ಮೌಲ್ಯದ ಒಂದು ಮೊಬೈಲ್ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

      ವಿನೋಬಾ ನಗರದ ನಿವಾಸಿ ರಾಘವೇಂದ್ರ.ಸಿ ಅಲಿಯಾಸ್ ರಘು ಹಾಗೂ ಶಾಂತಿ ನಗರ ನಿವಾಸಿ ಅಜಯ್ ಅಲಿಯಾಸ್ ಆರ್ ಎಕ್ಸ್ ಅಜಯ್ ಯಾನೆ ಮುನ್ನ ಬಂಧಿತರಾಗಿದ್ದಾರೆ.

      2018ರ ಜೂನ್ 4ರಂದು ರಂದು ಸಂಜೆ 5:30 ನಿರಂಜನ್ ಎ ಎಂಬುವರು ಬಡಾಣೆ ಠಾಣೆಗೆ ಹಾಜುರಾಗಿ, ಎಂಸಿಸಿ ಬಿ ಬ್ಲಾಕ್‍ನ 4ನೇ ಮೇನ್ 4ನೇ ಕ್ರಾಸ್‍ನಲ್ಲಿ ಹೋಗುತ್ತೀರುವಾಗ ಯಾರೋ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ಮೊಬೈಲ್‍ನ್ನು ಕಿತ್ತುಕೊಂಡು ಹೋಗಿದ್ದಾರೆಂಬುದಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಸದರಿ ಪ್ರಕರಣದ ಆರೋಪಿಗಳ ಪತ್ತೆಗಾಗಿ ಬಡಾವಣೆ ಪಿ.ಎಸ್.ಐ. ಶಿವರುದ್ರಪ್ಪ ಎಸ್ ಮೇಟಿ ಹಾಗೂ ಸಿಬ್ಬಂದಿಯ ತಂಡ ನೇಮಿಸಲಾಗಿತ್ತು. ಶಂಕೆಯ ಮೇಲೆ ಈ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಹಲ್ಲೆ ಮಾಡಿ  VIVO V9 youth  ಮೊಬೈಲ ನ್ನು ಕಿತ್ತುಕೊಂಡು ಹೋಗಿರುವುದಾಗಿ ಒಪ್ಪಿ ಕೊಂಡಿದ್ದು, 19,900 ರೂ ಮೌಲ್ಯದ ಮೊಬೈಲ್ ಮತ್ತು 30,000 ರೂ. ಮೌಲ್ಯದ ಸ್ಟಾರ್ ಸಿಟಿ ಬೈಕ್ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜುರು ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here