ಇವಿಎಂ ಹ್ಯಾಕ್ : ಕೋರ್ಟ್ ಮೆಟ್ಟಿಲೇರಿದ ಸೋತ ಕಾಂಗ್ರೆಸ್ ಅಭ್ಯರ್ಥಿಗಳು

0
15

ಬೆಂಗಳೂರು:     

    ಇವಿಎಂ ಅನ್ನು ಹ್ಯಾಕ್ ಮಾಡಿದ್ದ ಕಾರಣ ನಾವು ಚುನಾವಣೆಯಲ್ಲಿ ಸೋತಿದ್ದೇವೆ ಹಾಗಾಗಿ ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಹಾಗೂ ಸಂಪೂರ್ಣ ವಿಚಾರನೆ ನಡೆಸಿ ನ್ಯಾಯ ಒದಗಿಸಬೇಕು ಎಂದು ರಾಜ್ಯದ ನಾಲ್ಕು ಕಾಂಗ್ರೆಸ್ ಶಾಸಕರು ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. 

      ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಜೆ.ಆರ್.ಲೋಬೋ, ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಮೊಯಿದ್ದೀನ್ ಬಾವಾ, ಕೆ.ಆರ್.ನಗರದ ಎಂ.ಕೆ.ಸೋಮಶೇಖರ್, ಚಾಮರಾಜ ಕ್ಷೇತ್ರ ವಾಸು ಅವರುಗಳು ಇವಿಎಂ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

       ಹೈಕೋರ್ಟ್‌ನಲ್ಲಿ ಸೋಮವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ಅರ್ಜಿದಾರರ ಪರ ವಕೀಲ ಎನ್.ರವೀಂದ್ರನಾಥ ವಕಾಲತ್ತು ವಹಿಸಿದ್ದಾರೆ. ಅರ್ಜಿಗಳ ಬಗ್ಗೆ ಕೋರ್ಟ್ ಏನು ನಿಲವು ತಳೆಯುತ್ತದೆಯೋ ಕಾದು ನೋಡಬೇಕಿದೆ. 

 

 

LEAVE A REPLY

Please enter your comment!
Please enter your name here