ಇಸ್ಪೀಟ್ ಆಟ : 9 ಜನ ಬಂಧನ, ನಗದು-ದ್ವಿಚಕ್ರ ವಾಹನ ವಶ

0
48

ಕೊರಟಗೆರೆ:

Related image

      ಇಸ್ಪೀಟ್ ಅಡ್ಡೆಯ ಮೇಲೆ ಸಿಪಿಐ ಮುನಿರಾಜು ನೇತೃತ್ವದ ತಂಡದ ದಾಳಿ ನಡೆಸಿ 9 ಜನರನ್ನು ಬಂಧಿಸಿ 18,200 ರೂ. ನಗದು ಮತ್ತು 2 ದ್ವಿಚಕ್ರ ವಾಹನ ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

      ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋಡ್ಲಹಳ್ಳಿಯ ಹಳ್ಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬಾಲರಾಜು, ನರಸೀಯಪ್ಪ, ಚಂದ್ರಶೇಖರ್, ರವಿ, ಫಕ್ರುದ್ದೀನ್, ಶಿವರಾಜು, ಮಲ್ಲಣ್ಣ, ಶಟ್ಟಳಪ್ಪ, ಚಂದ್ರಶೇಖರ್ ಬಂಧಿತ ಆರೋಪಿಗಳು. ಚಿಕ್ಕವಳ್ಳಿ ಗ್ರಾಮದ ಡೇಂಜರ್ ಅಲಿಯಾಸ್ ರಾಮಕೃಷ್ಣ ಪರಾರಿಯಾಗಿದ್ದು, ಆತನ ಮೇಲೂ ಸೇರಿದಂತೆ ಒಟ್ಟು 9 ಜನರ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here