ಈಟಿ ಶಂಭುನಾಥರವರ ಪಾರ್ಥೀವ ಶರೀರ ಪಂಚಭೂತಗಳಲ್ಲಿ ಲೀನ

0
38

 ಹೂವಿನಹಡಗಲಿ :

      ಮಾಜಿ ಸಚಿವ ಈಟಿ ಶಂಭುನಾಥರವರ ಪಾರ್ಥೀವ ಶರೀರವು ಪಂಚಭೂತಗಳಲ್ಲಿ ಲೀನವಾಯಿತು.
ಅವರ ನಿವಾಸದ ಸಮೀಪದ ಭೂಮಿಯಲ್ಲಿ ಹಿಂದೂ ಧರ್ಮದ ಸಂಪ್ರದಾಯದಂತೆ ವಿವಿಧ ವಿಧಾನಗಳನ್ನು ನೆರವೇರಿಸಿ, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

      ಇದಕ್ಕೂ ಮುನ್ನ ಪಾರ್ಥೀವ ಶರೀರದ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಗವಿಮಠದ ಡಾ.ಹಿರಿಶಾಂತವೀರ ಶ್ರೀಗಳು, ಕನಕಗುರುಪೀಠದ ಸಿದ್ದರಾಮ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಚನ್ನಬಸವ ಮಹಾಸ್ವಾಮೀಜಿ, ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಮಾಜಿ ಶಾಸಕ ಬಿ.ಚಂದ್ರನಾಯ್ಕ ಈಟಿ ಶಂಭುನಾಥರವರ ಕಿರಿಯ ಪುತ್ರ ತಾ.ಪಂ.ಸದಸ್ಯ ಈಟಿ ಲಿಂಗರಾಜ, ಬ್ಲಾಕ್ ಅಧ್ಯಕ್ಷರುಗಳಾದ ಎಂ.ಪರಮೇಶ್ವರಪ್ಪ, ಐಗೋಳ್ ಚಿದಾನಂದ, ಅಟವಾಳಗಿ ಕೊಟ್ರೇಶ್, ವಾರದ ಗೌಸ್‍ಮೊಹಿದ್ದೀನ್, ಜ್ಯೋತಿ ಮಲ್ಲಣ್ಣ, ಪಾಲ್ಗೊಂಡಿದ್ದರು.

      ಮಾಜಿ ಶಾಸಕರುಗಳಾದ ಎಂ.ಪಿ.ರವೀಂದ್ರ, ನೇಮಿರಾಜನಾಯ್ಕ, ಮಾಜಿ ಎಂ.ಎಲ್.ಸಿ. ಮೃತ್ಯುಂಜಯ ಜಿನಗಾ, ಎ.ಸಿ. ಗಾರ್ಗಿ ಜೈನ್, ತಹಶೀಲ್ದಾರ್ ರಾಘವೇಂದ್ರರಾವ್, ಡಿ.ವೈ.ಎಸ್.ಪಿ. ದಶರಥಮೂರ್ತಿ, ಸಿ.ಪಿ.ಐ. ಸುದೀಂದ್ರ ಬೆಂಕಿ, ಹಾಗೂ ಓದೋ ಗಂಗಪ್ಪ, ಜಿ.ಪಂ.ಸದಸ್ಯ ಪಿ.ವಿಜಯಕುಮಾರ್, ಗುರುಲಿಂಗನಗೌಡ, ಹಾಗೂ ಹೆಚ್.ಪೂಜಪ್ಪ, ಸಂಜೀವರೆಡ್ಡಿ, ಎಂ.ಬಿ.ಬಸವರಾಜ್, ಕಾಂಗೈ ವಕ್ತಾರ ಬಿ.ಎಲ್.ಶ್ರೀಧರ ಸೇರಿದಂತೆ ಅನೇಕ ಗಣ್ಯಮಾನ್ಯರು ಅಂತಿಮ ನಮನ ಸಲ್ಲಿಸಿದರು.

 

LEAVE A REPLY

Please enter your comment!
Please enter your name here