ಈ ಕ್ಷಣದಿಂದಲೇ ಮತ್ತೆ ಸೈನ್ಯದ ಸೇವೆ ಮಾಡಲು ಸಿದ್ದ: ಸುಬೇದಾರ್ ನಾಗರಾಜ್

0
25

 

   ತುಮಕೂರು:

ಬಿಜೆಪಿ ಯುವ ಮೋರ್ಚಾ ವತಿಯಿಂದ ಜುಲೈ 28 ರಂದು ಕಾರ್ಗಿಲ್ ವಿಜಯ ದಿವಸದ ಕಾರ್ಯಕ್ರಮದಲ್ಲಿ  ಸುಬೇದಾರ್ ನಾಗರಾಜುರವರು ತನ್ನ 55ನೇ ಈ ವಯಸ್ಸಿನಲ್ಲಿ ಸಹ ದೇಶ ಸೇವೆ ಮಾಡಲು ಸೈನ್ಯಕ್ಕೆ ಹೋಗಲು ಸಿದ್ಧ, ಕರೆದರೆ ಈಗಲೇ ಬಸ್ ಹತ್ತಿ ನಾನು ಹೆಮ್ಮೆಯಿಂದ ಹೊರಡುತ್ತೇನೆ ಎಂದರು. ಸೈನ್ಯದಲ್ಲಿ ಕಾರ್ಯನಿರ್ವಹಿಸುವಾಗ ಕಾರ್ಗಿಲ್ ಭಾಗದಲ್ಲಿ ಮತ್ತು ಇತರೆಡೆ ಸೈನಿಕರು ಎಷ್ಟು ಕಷ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದನ್ನು ವಿವರಿಸಿದರು. ತನ್ನೊಟ್ಟಿಗೆ ಕೆಲಸ ಮಾಡುತ್ತಿದ್ದ ಅನೇಕರು ಕಣ್ಮುಂದೆ ಪ್ರಾಣ ತ್ಯಾಗ ಮಾಡಿದ್ದನ್ನು ನೆನಸಿಕೊಂಡು ಕಣ್ಣೀರಿಟ್ಟರು.

   ತಾವು ಕೆಲಸ ನಿರ್ವಹಿಸುವ ಕಾಲದಲ್ಲಿ ಸರಿಯಾದ ಸವಲತ್ತು ಇಲ್ಲದೆ ಸೈನಿಕರು ಪರಿತಪ್ಪಿಸುವಂತಹ ಪರಿಸ್ಥಿತಿ ಇತ್ತು. ಅತ್ಯಂತ ಕಡಿಮೆ ತಾಪಮಾನದ ಹಿಮ ಪ್ರದೇಶಗಳಲ್ಲಿ ಸರಿಯಾದ ಶೂಗಳ ವ್ಯವಸ್ಥೆ ಇರುತ್ತಿರಲಿಲ್ಲ, ಕಣ್ಣಿಗೆ ಸರಿಯಾದ ಕನ್ನಡಕ ಇರುತ್ತಿರಲಿಲ್ಲ ಎಂದು ನೊಂದುಕೊಂಡರು. ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಮತ್ತು ನಂತರ ಸೈನಿಕರಿಗೆ ಉತ್ತಮ ಸವಲತ್ತುಗಳು ದೊರಕುತ್ತಿವೆ ಎಂದು ಸಮಾಧಾನ ವ್ಯಕ್ತಪಡಿಸಿದರು.

   ಗಗನ್ ಹಬ್ಬಿನಹೊಳೆ ಮಾತನಾಡುತ್ತಾ ಭಾರತ ಸ್ವತಂತ್ರ ಬಂದ ನಂತರ ನಾಲ್ಕು ಯುದ್ಧಗಳನ್ನು ಎದುರಿಸಿದೆ. ಆದರೆ ಕಾರ್ಗಿಲ್ ಯುದ್ಧದಲ್ಲಿ ಮಾತ್ರ ಸಂಪೂರ್ಣ ಜಯ ಸಾಧಿಸಿದ್ದು, 1948 ರಲ್ಲಿ ನಡೆದ ಯುದ್ದದಲ್ಲಿ ಆಗಿನ ಪ್ರಧಾನಿಯ ದೂರದೃಷ್ಟಿ ಇಲ್ಲದ ಯೋಚನೆಯಿಂದ ಪಾಕ್ ಯುದ್ಧದಲ್ಲಿ ಗೆದ್ದರೂ ಸಹ ಪಾಕ್ ಆಕ್ರಮಿತ ಪ್ರದೇಶ ನಿರ್ಮಾಣವಾಯಿತೆಂದು ಮರುಕಪಟ್ಟರು. ನಮ್ಮ ನೆಚ್ಚಿನ ಪ್ರಧಾನಿಗಳಾದ ಅಟಲ್ ಜೀ ಮತ್ತು ನರೇಂದ್ರ ಮೋದಿಯವರು ಸೈನ್ಯಕ್ಕೆ ಆತ್ಮಬಲ ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಬೇದಾರ್ ನಾಗರಾಜ್‍ರವರನ್ನು ಸನ್ಮಾನಿಸಲಾಯಿತು. ರೈತಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಎಸ್.ಶಿವಪ್ರದಾದ್ ಜಿಲ್ಲಾ ಉಪಾಧ್ಯಕ್ಷರಾದ

    ಟಿ.ಆರ್.ಸದಾಶಿವಯ್ಯ, ನಗರ ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ರವೀಶಯ್ಯ, ಜಿಲ್ಲಾ ಮಹಿಳಾಮೋರ್ಚಾ ಅಧ್ಯಕ್ಷೆ ಸರೋಜಗೌಡ ಉಪಸ್ಥಿತರಿದ್ದರು. ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಟಿ.ಹೆಚ್.ಹನುಮಂತರಾಜು ಅಧ್ಯಕ್ಷತೆಯನ್ನು ವಹಿಸಿದ್ದರು. ಯುವ ಮೋರ್ಚಾ ಕಾರ್ಯದರ್ಶಿ ಹಿರೇಹಳ್ಳಿ ವಿನಯ್ ಕಾರ್ಯಕ್ರಮ ನಿರ್ವಹಿಸಿದರು, ರಮೇಶ್ ಸ್ವಾಗತಿಸಿದರು, ಶ್ರೀನಿವಾಸ್, ಗುರು, ಅಕ್ಷಯ್, ಕೊಪ್ಪಳ್ ನಾಗರಾಜು, ಎಸ್.ಟಿ.ಡಿ.ನಾಗರಾಜ್, ಗೀತಾಶಿವಣ್ಣ, ಕಿರಣ್, ನವೀನ್ ರಾಮಣ್ಣ, ಆನಂದ್, ಮಲ್ಲಿಕಾರ್ಜುನ್, ಜಗದೀಶ್, ಜ್ಯೋತಿ ತಿಪ್ಪೇಸ್ವಾಮಿ, ತೇಜುಮಣಿ, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here