ಉಚಿತ ಆರೋಗ್ಯ ಶಿಬಿರಗಳ ಮೂಲಕ ಉತ್ತಮ ಆರೋಗ್ಯ ಪಡೆಯಲು ಸಲಹೆ

0
29

 

ಚಳ್ಳಕೆರೆ-

   ನಿತ್ಯಜೀವನದಲ್ಲಿ ಅನೇಕ ಜಂಜಾಟಗಳ ಮಧ್ಯೆ ಆರೋಗ್ಯ ತಪಾಸಣೆಗೆ ಮುಂದಾಗಲು ಕೆಲವರು ಹಿಂದೇಟು ಹಾಕುತ್ತಾರೆ. ಆದರೆ, ವಾಸ್ತವವಾಗಿ ನಿರಂತರ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಆರೋಗ್ಯವಂತರಾದಲ್ಲಿ ಮಾತ್ರ ನಾವು ಹೆಚ್ಚು ದಿನ ನಮ್ಮ ಬದುಕನ್ನು ಚನ್ನಾಗಿ ನಡೆಸಬಹುದು ಎಂದು ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಹನುಮಂತರಾಯ ತಿಳಿಸಿದರು.


   ಅವರು ಭಾನುವಾರ ಇಲ್ಲಿನ ಸುರಕ್ಷಾ ಪಾಲಿ ಕ್ಲಿನಿಕ್ ಆವರಣದಲ್ಲಿ ಸಪ್ತಗಿರಿ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯಾವುದೇ ಸಂದರ್ಭದಲ್ಲಾದರೂ ಯಾವುದೇ ರೋಗ ಮನುಷ್ಯನನ್ನು ವ್ಯಾಪಿಸಿ ಜೀವಕ್ಕೆ ಅಪಾಯ ಮಾಡುವ ಸಂದರ್ಭವೇ ಹೆಚ್ಚು. ಈ ಹಿನ್ನೆಲೆಯಲ್ಲಿ ಇಂತಹ ಉಚಿತ ತಪಾಸಣಾ ಶಿಬಿರದಲ್ಲಿ ಮನುಷ್ಯನ ಮರಣಕ್ಕೆ ಕಾರಣವಾಗುವಂತಹ ರೋಗಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಇಂತಹ ಶಿಬಿರಗಳು ಉಪಯುಕ್ತವಾಗುತ್ತವೆ ಎಂದರು.

    ಶಿಬಿರದಲ್ಲಿ ಡಾ.ಶುಭಂ, ಡಾ.ಲತಾ ಡಾ.ಮಂಜುನಾಥ ಮತ್ತು ಸಿಬ್ಬಂದಿ ವರ್ಗ ಹಲವಾರು ರೋಗಗಳ ತಪಾಸಣೆಯನ್ನು ಯಶಸ್ಸಿಯಾಗಿ ನಡೆಸಿದರು. ಸುರಕ್ಷಾ ಪಾಲಿ ಕ್ಲಿನಿಕ್‍ನ ವ್ಯವಸ್ಥಾಪಕ ಪರೀದ್ ಖಾನ್ ಮಾತನಾಡಿ, ಒಟ್ಟು 250 ರೋಗಿಗಳು ತಪಾಸಣೆಗೆ ಒಳಗಾಗಿದ್ದು, ಅಪೈಕಿ 38 ಜನರಿಗೆ ಸರ್ಜರಿಯಾಗಬೇಕಿದೆ. 8 ಜನರಿಗೆ ಹೃದಯ ರೋಗದಿಂದ ಬಳಲುತ್ತಿದ್ಧಾರೆ, 27 ಜನರು ಕೆಲವು ರೋಗಗಳಿಂದ ಬಾದಿತರಾಗಿದ್ಧಾರೆ. ಈ ಹಿನ್ನೆಲೆಯಲ್ಲಿ 38 ರೋಗಿಗಳನ್ನು ಆಗಸ್ಟ್ 8ರ ಬುಧವಾರ ಆಸ್ಪತ್ರೆಯ ವಾಹನದಲ್ಲಿ ಕರೆದ್ಯೊಯುದ್ದು ಚಿಕಿತ್ಸೆ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಎಸ್.ಬಿ.ತಿಪ್ಪೇಸ್ವಾಮಿ, ಬಾಬು, ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here