ಉಚಿತ ಮಧುಮೇಹ ರಕ್ತ ತಪಾಸಣಾ ಶಿಬಿರ

ರಾಣಿಬೆನ್ನೂರ:

             ನಿತ್ಯದ ಆಹಾರ-ವಿಹಾರ ಮತ್ತು ಪರಿಸರ ಕಲುಷಿತ ವಾತಾವರಣದಿಂದಾಗಿ ಇಂದು ಪ್ರತಿಯೊಬ್ಬರು ಅನೇಕ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ನಿತ್ಯದ ಬದುಕಿನಲ್ಲಿ ವಾಯು-ವಿಹಾರ ಅಳವಡಿಸಿಕೊಂಡು ಮಿತ ಆಹಾರ ಕ್ರಮವನ್ನು ಅಳವಡಿಸಿಕೊಂಡರೆ ಮಧುಮೇಹ ಬಾರದಂತೆ ತಡೆಗಟ್ಟಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಆರ್.ಡಿ.ಹೊಂಬರಡಿ ಹೇಳಿದರು.
               ನಗರದಲ್ಲಿ ಸಂಘವು ಆಯೋಜಿಸಿದ್ದ ಉಚಿತ ಮಧುಮೇಹ ರಕ್ತ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ವಾಯು ವಿಹಾರ ಅನುಸರಣೆ ಕ್ರಮಬದ್ಧವಾಗಿ ನಿತ್ಯವೂ ನಡೆಯಬೇಕು ಇದರಿಂದ ಮಧುಮೇಹಿಗಳು ಭವಿಷ್ಯದಲ್ಲಿ ಬರಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಬಹುದಾಗಿದೆ ಎಂದರು.
              ಡಾ| ಟಿ.ವಿ.ಶಿವಾನಂದಪ್ಪ, ಡಾ| ಸನಾಉಲ್ಲಾ ನದಾಫ್, ಡಾ| ವಿಕ್ರಮ್ ಸಣ್ಣಮನಿ ಮತ್ತಿತರೆ ವೈದ್ಯರು ತಪಾಸಣೆ ನಡೆಸಿ ಮಾರ್ಗದರ್ಶನ ನೀಡಿದರು. ಅಶೋಕ ಶಿವರಡ್ಡಿ, ಎಸ್.ಎಂ. ಗೌಡರ್, ಎಂ.ಎನ್.ಬಲ್ಲೂರ, ಕೆ.ಬಿ.ದುರ್ಗದ, ಪ್ರೇಮಾ ಕನ್ನಾಯಕನವರ, ಬಸಮ್ಮ ಲಮಾಣಿ, ಕಮಲವ್ವ ಮ್ಯಾಗೇರಿ, ಸವಿತಾ ಮುಂಡಾಸದ, ಸಿ.ಜಿ.ಹೊನ್ನಪ್ಪನವರ, ಪಿ.ಆರ್.ಸಣ್ಣಗೌಡ್ರ, ಎಸ್.ಬಿ.ಮಣಕೂರ, ಎಸ್.ಜಿ.ಬಣಕಾರ, ಎನ್.ಐ.ಹಲಗೇರಿ, ಕೆ.ಎಸ್.ತಾವರಗೊಂದಿ ಮತ್ತಿತರರು ಇದ್ದರು.

Recent Articles

spot_img

Related Stories

Share via
Copy link
Powered by Social Snap