ಉತ್ತಮ ಅಡಿಕೆ ತೆಂಗು ಬೆಳೆಯುವ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ

0
57

 

 ಕೊಡಗೀಹಳ್ಳಿ ಅಡಿಕೆ ಮತ್ತು ತೆಂಗು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಗ್ಗಿದು. ಅವುಗಳನ್ನು ಬೆಲೆಯುವ ವಿಧಾನದಲ್ಲಿ ವೈಜ್ಞಾನಿಕ ತೆಯನ್ನು ಅಳವಡಿಸಿ ಕೊಂಡರೆ ಇನ್ನು ಹೆಚ್ಚಿನ ಇಳುವರಿ ಯನ್ನು ಪಡೆಯಬಹುದು.ಎಂದು ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿಯ ವಿಷಯ ತಜ್ಞ ಜೆ, ಎಮ್, ಪ್ರಶಾಂತ್ ತಿಳಿಸಿದರು.

   ಮಂಗಳವಾರ ಸುಗ್ರಾಮ ಯೋಜನೆ ನವ್ಯದಿಶ ಟ್ರಸ್ಟ್ ತುಮಕೂರು,ಗ್ರಾಮೀಣ ಕೂಟ,ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿ,ಹಾಗೂ ಊರ್ಡಿಗೆರೆ ಗ್ರಾಮ ಪಂಚಾಯತಿ ಸಂಯುಕ್ತಶ್ರಾದಲ್ಲಿ ಊರ್ಡಿಗೆರೆ ಹೋಬಳಿಯ ಕೊಡಿಗೇಹಳ್ಳಿಯಲ್ಲಿ ಗ್ರಾಮದಲ್ಲಿ ಜರುಗಿದ ” ಉತ್ತಮ ಅಡಕೆ ಮತ್ತು ತೆಂಗು ಬೆಳೆಯುವ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ ದಲ್ಲಿ ರೈತರೊಡನೆ ಸಂವಾದ ನಡೆಸಿದರು.ಹಾಗೂ ತೆಂಗಿಗೆ ಒಂದು ದಿನಕ್ಕೆ ಕನಿಷ್ಠ 16 ರಿಂದ 20 ಲೀಟರ್ ನೀರು ಅಗತ್ಯವಿದೆ, ಹಾಗೂ ಅಡಿಕೆ ಗೆ ಬುಡದಿಂದ ಎರಡು ಅಡಿ ಅಂತರದಲ್ಲಿ ಗೊಬ್ಬರ ವನ್ನು ಹಾಕಬೇಕು,ಇದರಿಂದ ನಿಮ್ಮ ಹಣ ಹಾಗೂ ಶ್ರಮ ಊಳಿಯುವುದಲ್ಲದೆ ಹೆಚ್ಚಿನ ಇಳುವರಿ ಯು ಬರುತ್ತದೆ ಎಂದು ಅವರು ತಿಳಿಸಿದರು.
ರೈತರು ಪ್ರತಿದಿನ ಅಡಿಕೆ,ತೆಂಗಿನ ಮರಗಳೊಂದಿಗೆ ಮಾತನಾಡುವ ಗುಣ ಬೆಳಸಿಕೊಳ್ಳಬೇಕು ಅವುಗಳಿಗೆ ಜೀವ ಇದೆ. ಇದರಿಂದ ಅವುಗಳ ಬೆಳವಣಿಗೆ ಗೆ ಸಹಕಾರಿ ಯಾಗುತ್ತದೆ ಮತ್ತು ಅಣಬೆ ರೋಗ, ರಸ ಸೇರುವಿಕೆ, ಸುಳಿ ರೋಗಗಳು ಬರದಂತೆ ತಡೆಗಟ್ಟುವ ವಿಧಾನಗಳ ಕುರಿತು ಚಿತ್ರ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.

   ಸುಗ್ರಾಮ ಯೋಜನೆಯ ಸಂಯೋಜಕ ಯಂಜೇರಪ್ಪ ಮಾತಾನಾಡಿ,ನವ್ಯದಿಶ ಟ್ರಸ್ಟ್ ಕಳೆದ
ನಾಲ್ಕು ವರ್ಷಗಳಿಂದ ಊರ್ಡಿಗೆರೆಯಲ್ಲಿ ನೀರು ಮತ್ತುನೈರ್ಮಲ್ಯಕ್ಕೆ ಸಂಬಂದಿಸಿದಂತೆ ಕಾರ್ಯ ನಿರ್ವಹಿಸಿತ್ತಿದ್ದು. ಪ್ರಸ್ತುತ ವರ್ಷ ಅಡಿಕೆ,ತೆಂಗು ಬೆಳೆಗಾರರಿಗೆ,ಮಹಿಳೆಯರಿಗೆ, ಹಾಗೂ ಮಕ್ಕಳಿಗೆ ತರಬೇತಿ ಕಾರ್ಯಗಳನ್ನು ರೂಪಿಸಿ ಅವರ ಜೀವನ ಮಟ್ಟ ಹೆಚ್ಚಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.

   ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಪಿ ಅರ್ ರಮೇಶ್ ನವ್ಯ ದಿಶ ಟ್ರಸ್ಟ್ ನ ಹಾಗೂ ಅಭಿವೃದ್ಧಿ ಅಧಿಕಾರಿಗಳಾದ  ರಾಜಶೇಖರ,ಈರನಗೌಡ, ಹಾಗೂ ತೆಂಗು ,ಅಡಿಕೆ ಬೆಳೆಗಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here