ಉತ್ತಮ ಮನೆಯನ್ನು ಹೊಂದುವ ಹಕ್ಕು ಹುಟ್ಟಿನೊಂದಿಗೆ ಬರುತ್ತದೆ

0
117

 ತುಮಕೂರು:

      ಉತ್ತಮ ಮನೆಯನ್ನು ಹೊಂದುವ ಹಕ್ಕು ಮನುಷ್ಯನ ಹುಟ್ಟಿನೊಂದಿಗೆ ಬಂದಿರುತ್ತದೆ. ಸ್ವಂತ ಮನೆ ಕೊಳ್ಳಲಾಗದ ಕಡಿಮೆ ಆದಾಯವಿರುವವರಿಗೆ ಉತ್ತಮ ಮನೆಗಳನ್ನು ಕಟ್ಟಿಕೊಟ್ಟು ಅವರ ಜೀವನ ಶೈಲಿಯನ್ನು ಉತ್ತಮಪಡಿಸುವುದು ನಮ್ಮ ಗುರಿ ಎಂದು ಫೆಲಿಸಿಟಿ ಅಡೋಬ್ ಸಂಸ್ಥಾಪಕ ಮತ್ತು ಸಿಇಒ ಪ್ರಿನಾಂದ್ ಪ್ರೇಮಚಂದ್ರನ್ ತಿಳಿಸಿದರು.

      ಅವರು ತುಮಕೂರು ತಾಲ್ಲೂಕಿನ ಅನ್ನೇನಹಳ್ಳಿಯಲ್ಲಿ ಫೆಲಿಸಿಟಿ ಅಡೋಬ್ ಸ್ವರ್ಣಗೃಹ 1 ಉತ್ತಮ ಯೋಜನೆಗಳ ಸರಣಿಯಲ್ಲಿ ಪ್ರಾರಂಭಿಸಿರುವ ಹೋಮ್ಸ್ ಫಾರ್ ಆಲ್ ಯೋಜನೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

      2022ರ ವೇಳೆಗೆ ಎಲ್ಲರೂ ಮನೆ ಹೊಂದುವ ಪ್ರಧಾನಮಂತ್ರಿಯ ಕನಸುಗಳನ್ನು ನನಸು ಮಾಡಲು ಪ್ರಧಾನಮಂತ್ರಿ ಆವಾಸ್ ಯೋಜನ ಸರ್ಕಾರಿ ಯೋಜನೆಯಡಿ ಎಲ್ಲಾ ವಸತಿ ಸೌಲಭ್ಯಗಳನ್ನು ಹಂಚಿಕೊಂಡಿದೆ. ಹೀಗಾಗಿ ನಾವು ಸ್ವರ್ಣ ಗೃಹ ಆರಂಭಿಸಿದ್ದು, ಈ ಸರಣಿಯಲ್ಲಿ ಅತ್ಯುತ್ತಮ ಮನೆಗಳನ್ನು ನಿರ್ಮಿಸಿ ಕಡಿಮೆ ದರದಲ್ಲಿ ಅವಶ್ಯಕತೆ ಇರುವವರಿಗೆ ನೀಡುವುದು ನಮ್ಮ ಉದ್ದೇಶ ಎಂದರು.

      ಎಸ್‍ಎಸ್‍ಐಟಿಯ ಡಾ.ಟಿ.ವಿ.ಮಲ್ಲೇಶ್ ಮಾತನಾಡಿ ಆಧುನಿಕ ತಂತ್ರಜ್ಞಾನವು ಎಲ್ಲಾ ಮನೆಗಳಲ್ಲಿ ಕೆಸದ ನಿರ್ವಹಣೆ ಮತ್ತು ಏಕರೂಪದ ಶಕ್ತಿಯ ನಿರ್ವಹಣೆಗೆ ನೆರವಾಗುತ್ತದೆ. ಯೋಜನೆ ನಿರ್ದಷ್ಟ ಅವಧಿಯಲ್ಲಿ ಪೂರ್ಣಗೊಳ್ಳುವ ಮೂಲಕ ನಿರ್ಮಾಣ ಸಮಯವೂ ಗಣನೀಯವಾಗಿ ಇಳಿದಿದೆ ಎಂದರು.

      ಸಿಖನ್ ಇನ್ಫ್ರಾ ಪ್ರೈವೇಟ್ ನಿರ್ದೇಶಕ ಸುನಿತ್‍ಕುಮಾರ್ ಮಾತನಾಡಿ ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವರ್ಣಗೃಹವನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣವಾಗುತ್ತದೆ, ಹಾಗೆಂದು ಇದು ಕಡಿಮೆ ವೆಚ್ಚದ ಕಳಪೆ ಮನೆಯಲ್ಲ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಟಿಒಎಸ್ ಕಾರ್ಯದರ್ಶಿ ಕೆ.ಜಿ.ಬಸವಲಿಂಗಪ್ಪ, ಫೆಲಿಸಿಟಿ ಅಡೋಬ್ ಸಂಸ್ಥಾಪಕ ಮತ್ತು ನಿರ್ದೇಶಕ ಪ್ರಣವ್ ಶರ್ಮಾದೀಪಕ್ ಶೆಟ್ಟಿ ಇತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here