ಉತ್ತರಕರ್ನಾಟಕ ಬಂದ್, ಪ್ರತಿಭಟನೆಗೆ ಅಪಸ್ವರ

0
33

 ಹುಬ್ಬಳ್ಳಿ:

      ಉತ್ತರಕರ್ನಾಟಕ ಪ್ರತ್ಯೇಕ ಕೂಗಿಗೆ ಆಗ್ರಹಿಸಿ ಆಗಸ್ಟ್ 2 ರಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಗೆ ಈಗ ಅಪಸ್ವರ ಎದ್ದಿದೆ.

      ಹುಬ್ಬಳ್ಳಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ದಲಿತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು, ರಾಜ್ಯ ಇಬ್ಬಾಗವಾದಲ್ಲಿ, ಅಭಿವೃದ್ದಿ ಎಂಬುದು ಶೂನ್ಯ. ಈ ಹಿಂದೆ ಈ ಭಾಗದಿಂದ ಗೆದ್ದು ಹೋದ ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ದಿಯಾದರೂ ಏನು ಎಂದು ಪ್ರಶ್ನಿಸಿದರು.

      ಪ್ರತ್ಯೇಕತೆ ನಾವು ಅವಕಾಶ ನೀಡುವುದಿಲ್ಲ. ಅಖಂಡ ಕರ್ನಾಟಕ ಅಭಿವೃದ್ದಿಗೆ ಶ್ರಮಿಸಲಿ ಎಂದು ಹೇಳಿರುವ ಸಂಘಟನೆಗಳು. ಒಂದು ವೇಳೆ ಅಭಿವೃದ್ದಿಗೆ ಹಿನ್ನೆಡೆಯಾದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿವೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ಇಬ್ಬಾಗವಾಗಲು ಬಿಡುವುದಿಲ್ಲ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here