ಉತ್ತರ ಒಳನಾಡಿನ ಕೆಲವೆಡೆ ಮಳೆ

0
61

ಬೆಂಗಳೂರು:

   ನೈಋತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿದ್ದು, ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.

      ಆಗುಂಬೆಯಲ್ಲಿ ಅತಿಹೆಚ್ಚು 30 ಸೆಂಟಿಮೀಟರ್, ಕೊಲ್ಲೂರಿನಲ್ಲಿ 26, ಗೇರುಸೊಪ್ಪದಲ್ಲಿ 21 ಸೆಂಟಿಮೀಟರ್ ಮಳೆ ಬಿದ್ದಿದೆ.

      ಉಳಿದಂತೆ ಮೂಡುಬಿದ್ರೆ 20, ಕಮ್ಮರಡಿ 18, ಬಂಟ್ವಾಳ, ಸುಳ್ಯ, ಭಾಗಮಂಡಲದಲ್ಲಿ ತಲಾ 16,  ಸುಬ್ರಹ್ಮಣ್ಯ 15, ಬೆಳ್ತಂಗಡಿ, ಧರ್ಮಸ್ಥಳ, ಮಾಣಿ, ಕೊಪ್ಪಗಳಲ್ಲಿ 13, ಪುತ್ತೂರು, ಶೃಂಗೇರಿ, ಕಳಸಗಳಲ್ಲಿ ತಲಾ 12 ಸೆಂಟಿಮೀಟರ್ ಮಳೆಯಾಗಿದೆ. ಸಿದ್ದಾಪುರ, ಶಿರಾಳಿ, ನಾಪೆÇಕ್ಲು, ಲಿಂಗನಮಕ್ಕಿ, ಜಯಪುರದಲ್ಲಿ ತಲಾ 11 ಸೆಂಟಿಮೀಟರ್, ಕುಂದಾಪುರ, ಕ್ಯಾಸಲ್‍ರಾಕ್, ಕೊಟ್ಟಿಗೆಹಾರಗಳಲ್ಲಿ ತಲಾ 10 ಸೆಂಟಿಮೀಟರ್ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿ ನೀರು ಹರಿವಿನಲ್ಲಿ ಹೆಚ್ಚಳವಾಗಿದೆ. ಶೃಂಗೇರಿಯಲ್ಲಿ ಕೆಲ ಪ್ರದೇಶಗಳು ಜಲಾವೃತವಾಗಿವೆ.

      ಮುನ್ಸೂಚನೆಯಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಹಾಗೂ ಉತ್ತರ ಒಳನಾಡಿನ ಅನೇಕ ಕಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಕರಾವಳಿಯಲ್ಲಿ ವೇಗದ ಗಾಳಿ ಬೀಸುವ ಬಗ್ಗೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡದ ವಾತಾವರಣವಿದ್ದು, ಒಂದೆರಡು ಬಾರಿ ಮಳೆಯಾಗುವ ಸೂಚನೆಗಳಿವೆ. ಮೇಲ್ಮೈ ಗಾಳಿ ಕೆಲವೊಮ್ಮೆ ವೇಗವಾಗಿರಬಹುದು.

LEAVE A REPLY

Please enter your comment!
Please enter your name here