ಉತ್ತರ ಕರ್ನಾಟಕ : ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ..!

0
48

ಹುಬ್ಬಳ್ಳಿ:

Related image

      ಉತ್ತರ ಕರ್ನಾಟಕ ಕರ್ನಾಟಕ ಭಾಗವು ಅಭಿವೃದ್ಧಿಯಿಂದ ವಂಚನೆಯಾಗಿರುವುದು ಸತ್ಯ. ಅದಕ್ಕೋಸ್ಕರ ಪ್ರತ್ಯೇಕ ರಾಜ್ಯದ ಬೇಡಿಕೆಯಿಡುವುದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

      ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಅಭಿವೃದ್ಧಿಯಾದಷ್ಟು ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಪ್ರತಿ ಬಾರಿಯ ಬಜೆಟ್’ನಲ್ಲೂ ಮೈಸೂರು ಕರ್ನಾಟಕ ಭಾಗಕ್ಕೇ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಹಿಂದುಳಿಯುವಂತಾಗಿದೆ ಎಂದರು.

      ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕುರಿತು, ಆ ಭಾಗದಲ್ಲಿಯೇ ಸಭೆ ಕರೆಯುವುದಾಗಿ ಹೇಳಿರುವ ಮುಖ್ಯಮಂತ್ರಿಯವರು ಈ ಭಾಗಕ್ಕೆ ಇಷ್ಟು ವರ್ಷ ನೀಡಿರುವ ಅನುದಾನಗಳ ದಾಖಲೆಗಳನ್ನು, ಲೆಕ್ಕಗಳನ್ನು ನೀಡಲಿ. ಅಗತ್ಯಬಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಶ್ವೇತಪತ್ರವನ್ನು ಹೊರಡಿಸಲಿ. ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸುವುದಾಗಿ ಹೇಳುತ್ತಾರೆ. ಅಧಿಕಾರ ಅವರ ಬಳಿಯೇ ಇರುವುದರಿಂದ, ಅಧಿವೇಶನದವರೆಗೆ ಕಾಯುವುದೇಕೆ..? ಶೀಘ್ರವೇ ಶ್ವೇತಪತ್ರ ಹೊರಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಹಿಂದಿನಿಂದಲೂ ಉತ್ತರ ಕರ್ನಾಟಕ ಭಾಗ ಅನ್ಯಾಯ ಹಾಗೂ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ. ಹಾಗೆಂದು ಪ್ರತ್ಯೇಕ ರಾಜ್ಯದ ಬೇಡಿಕೆ ಪರಿಹಾರವಲ್ಲ. ಇದು ಬಿಜೆಪಿಯ ಸ್ಪಷ್ಟ ನಿಲುವೂ ಕೂಡ ಹೌದು ಎಂದು ಸ್ಪಷ್ಟಪಡಿಸಿದರು. ಅನ್ಯಾಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಒಕ್ಕೊರಲಿನಿಂದ ಗಟ್ಟಿಯಾದ ಧ್ವನಿ ಎತ್ತಬೇಕಿದೆ. ರಾಜ್ಯ ಸರಕಾರದ ಮುಂದೆ ಹಕ್ಕನ್ನು ಮಂಡಿಸಬೇಕಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here