ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯ

0
72

ಪಾವಗಡ:

   ಉಪ್ಪಾರರೂ ಸಹ ಬೋವಿ ಸಮುದಾಯದಂತೆ ಕಲ್ಲು, ಮಣ್ಣಿನ ಕೆಲಸ ಮಾಡಿಕೊಂಡು ಬರುತ್ತಿರುವುದರಿಂದ ನಮ್ಮನ್ನು ಕರ್ನಾಟಕ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಒತ್ತಾಯಿಸಿದರು.

      ಅವರು ಬುಧುವಾರ ಪಟ್ಟಣದ ಎಸ್.ಎಸ್.ಕೆ ಬಯಲು ರಂಗ ಮಂದಿರದಲ್ಲಿ ತಾಲ್ಲೂಕು ಭಗೀರಥ ಉಪ್ಪಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಭಗೀರಥ ಜಯಂತಿಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ಉಪ್ಪಾರ ಸಮುದಾಯದ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವ ಮೂಲಕ ಭಗೀರಥನಂತೆ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡು ನವ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕಂಕಣ ಬದ್ದರಾಗಬೇಕೆಂದರು.

      ಜಿ.ಪಂ.ಸದಸ್ಯ ಎಚ್.ವಿ.ವೆಂಕಟೇಶ್ ಮಾತನಾಡಿ, ಉಪ್ಪಾರ ಜನಾಂಗವು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಬರಬೇಕು. ಉಪ್ಪಾರ ಜನಾಂಗವು ಹಾಸ್ಟೆಲ್ ಕಟ್ಟಡಕ್ಕೆ ಬೇಡಿಕೆ ಇಟ್ಟಿರುವುದರಿಂದ ನಿವೇಶನ ಹುಡುಕಿಕೊಟ್ಟರೆ ಸಮುದಾಯ ಭವನ ನಿರ್ಮಾಣ ಮಾಡಲು ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ಕೊಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

      ನಿರಾಶ್ರಿತರ ಪುನರ್ವಸತಿ ನಿಗಮದ ಮಾಜಿ ಅಧ್ಯಕ್ಷ ವೆಂಕೋಬ, ಬೆಂಗಳೂರು ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಪಾವಗಡ ಲೋಕೋಪಯೋಗಿ ಇಲಾಖೆಯ ಎ.ಇ.ಇ..ಲೋಕೇಶ್(ಅಪ್ಪಾಜಿ), ಪುರಸಭೆ ಅಧ್ಯಕ್ಷೆ ಸುಮಾಅನಿಲ್, ಉಪಾಧ್ಯಕ್ಷೆ ನಾಗಲಕ್ಷ್ಮಮ್ಮ, ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ, ಅರಳಿಕುಂಟೆ ರಾಮಾಂಜಿನಪ್ಪ, ಗುಂಡಾರ್ಲಹಳ್ಳಿ ಜಿ.ಎಸ್.ನಾಗರಾಜ್, ನಾರಾಯಣಪ್ಪ, ಪರಮೇಶ್ವರಪ್ಪ, ವೆಂಕಟೇಶಪ್ಪ, ದೊಡ್ಡನರಸಯ್ಯ, ರಮೇಶ್, ಗಂಗಪ್ಪ, ತಿಮ್ಮಪ್ಪ, ಚಿರಂಜೀವಿ, ಕೆ.ವಿ.ನಾಗರಾಜ್, ಹನುಮಂತರಾಯ, ನಾಗೇಂದ್ರ, ಗೋಪಾಲ, ಕೊಡಮಡಗು ಕೃಷ್ಣಪ್ಪ, ತಿಪ್ಪೇಸ್ವಾಮಿ, ಜಯರಾಮ್, ರವಿ ಮತ್ತಿತರರು ಹಾಜರಿದ್ದರು.ಪಟ್ಟದ ಮುಖ್ಯ ರಸ್ತೆಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಎಸ್.ಎಸ್.ಕೆ.ಬಯಲು ರಂಗಮಂದಿರದವರೆಗೂ ಮೆರವಣಿಗೆ ನಡೆಸಲಾಯಿತು.

LEAVE A REPLY

Please enter your comment!
Please enter your name here