ಉ.ಕ.ದ ಕಿಚ್ಚಿಗೆ ಮಾಧ್ಯಮಗಳೇ ಕಾರಣ – ಮುಖ್ಯಮಂತ್ರಿ ಕಿಡಿ

0
46

ಬೆಂಗಳೂರು:

Related image

      ಪ್ರತ್ಯೇಕ ಉತ್ತರಕರ್ನಾಟಕ ಕಿಚ್ಚು ಹೆಚ್ಚಲು ಮಾಧ್ಯಮಗಳೇ ಕಾರಣ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಕಿಡಿ ಕಾರಿದರು.

      ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಉತ್ತರಕರ್ನಾಟಕ ಪ್ರತ್ಯೇಕತೆ ಬಗ್ಗೆ ನಾನು ಯಾವುದೇ ತಪ್ಪು ಹೇಳಿಕೆ ನೀಡದಿದ್ದರೂ ಕೂಡಾ ಮಾಧ್ಯಮಗಳು ಅದನ್ನು ತಿರುಚಿ ಅದನ್ನು ಒತ್ತಿ ಒತ್ತಿ ಹೇಳಲಾಗಿದೆ.ಈ ಎಲ್ಲಾ ಬೆಳವಣಿಗೆಗಳಿಗೆ ಮಾಧ್ಯಮಗಳೇ ಕಾರಣ.ಬಿಜೆಪಿಯ ಶ್ರೀರಾಮುಲು ಅವರ ವಿಚಾರ ಬಿಟ್ಟರೆ, ಬೇರೇನೂ ಮಾತನಾಡಿಲ್ಲ ಎಂದ ಅವರು ಶ್ರೀರಾಮುಲು ಅವರು ಪ್ರತ್ಯೇಕ ರಾಜ್ಯ ಕುರಿತು ಮಾತನಾಡಿದ ಕಾರಣ,ಪ್ರತ್ಯೇಕ ರಾಜ್ಯವಾದರೆ, ಅನುದಾನ ಎಲ್ಲಿಂದ ತರುತ್ತೀರಿ ಎಂದು ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದೆ ಅಷ್ಟೆ. ಅದು ಬಿಟ್ಟರೆ ಬೇರೇನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

      ಉತ್ತರ ಕರ್ನಾಟಕದ ಹೇಳಿಕೆ ನೀಡುವುದು ಅನಗತ್ಯ ಎಂದ ಅವರು, ರಾಜ್ಯ ಉದ್ದಾರ ಆಗಬೇಕೋ, ಅಥವಾ ಹಾಳಾಗಿ ಹೋಗಬೇಕೋ ನೀವೇ ಹೇಳಿ. ನಾನು ಯಾವುದೇ ಕಾರಣಕ್ಕೂ ಇದಕ್ಕೆ ರೈತರನ್ನು ಹೊಣೆ ಮಾಡುವುದಿಲ್ಲ. ಈ ಉ.ಕ.ದ ಕಿಚ್ಚಿಗೆ ರಾಜಕಾರಣಿಗಳಲ್ಲ, ಮಾಧ್ಯಮದವರು ಕಾರಣ ಎಂದು ಹೇಳಿದರು.

LEAVE A REPLY

Please enter your comment!
Please enter your name here