ಉ.ಕ.ಸಮಗ್ರ ಅಭಿವೃದ್ದಿಗೆ ಮಠಾಧೀಶರ ಧರಣಿ

0
40

ಬೆಳಗಾವಿ:

      ಇಲ್ಲಿನ ಸುವರ್ಣಸೌಧದ ಮುಂದೆ ಇಂದು ವಿವಿಧ ಮಠಾಧೀಶರು ಮತ್ತು ಹೋರಾಟಗಾರರು, ಉತ್ತರಕರ್ನಾಟಕದ ಸಮಗ್ರ ಅಭಿವೃಧ್ದಿಗೆ ಆಗ್ರಹಿಸಿ, ಪ್ರತಿಭಟನೆ ನಡೆಸಿದರು.

ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉ-ಕ ಭಾಗದ ಅಭಿವೃದ್ಧಿಗೆ ಆಗ್ರಹಿಸಲು ಸ್ವಾಮೀಜಿಗಳು ಒಟ್ಟಾಗಿ ಬಂದಿದ್ದೇವೆ. ನಮ್ಮದು ಪ್ರತ್ಯೇಕತೆ ಕೂಗು ಅಲ್ಲ. ಆ ಬಗ್ಗೆ ವಿರೋಧವಿದೆ. ಜನಪ್ರತಿನಿಧಿಗಳು ಉತ್ತರ ಕರ್ನಾಟಕವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ಹೇಳಿದರು.

      ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಆಗದೆ ಹೋದರೆ ಈ ಭಾಗದ ಎಲ್ಲ ರಾಜಕಾರಣಿಗಳೂ ರಾಜೀನಾಮೆ ನೀಡಬೇಕು ಎಂದು ಹಂದಿಗುಂದ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.

      ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧದ ಎದುರು ಧರಣಿ ನಡೆಸಿ ಮಾತನಾಡಿ, ಉತ್ತರ ಕರ್ನಾಟಕ್ಕೆ ಅಗ್ಗದ ಯೋಜನೆ ಜಾರಿ ಮಾಡುವುದನ್ನು ಬಿಟ್ಟು ಶಾಶ್ವತ ಯೋಜನೆ ಅನುಷ್ಠಾನ ಮಾಡಬೇಕು. ಮಲತಾಯಿ ಧೋರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

      ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ, ದುರದುಂಡೇಶ್ವರ ಮಠದ ಮುರಗೋಡ ನೀಲಕಂಠ ಸ್ವಾಮೀಜಿ, ಮೂರು ಸಾವಿರ ಮಠ ಬೈಲಹೊಂಗಲ ಶಾಖಾಮಠದ ಪ್ರಭು ನೀಲಕಂಠ ಸ್ವಾಮೀಜಿ ಮತ್ತಿತರರು ಸೇರಿ ಸುಮಾರು 30 ಸ್ವಾಮೀಜಿಗಳು ಪಾಲ್ಗೊಂಡಿದ್ದರು.

      ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿದರು. ಇವರೊಂದಿಗೆ ಉಮೇಶ್‍ಕತ್ತಿ, ನಡಹಳ್ಳಿ ಸೇರಿದಂತೆ ಇತರರು ಸಾಥ್ ನೀಡಿದರು. 

LEAVE A REPLY

Please enter your comment!
Please enter your name here