ಎರಡು ದ್ವಿಚಕ್ರವಾಹನಗಳಿಗೆ ಬೆಂಕಿ : ಪ್ರಕರಣ ದಾಖಲು

0
15

 ಪಾವಗಡ:

      ಎರಡು ದ್ವಿಚಕ್ರವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಪ್ರಕರಣ ತಾಲ್ಲೂಕಿನ ಅರಸೀಕರೆ ಪೋಲೀಸ್ ಠಾಣಾ ವ್ಯಾಪ್ತಿಯ ಲಿಂಗದಹಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯ ರಾತ್ರಿ ಜರುಗಿದೆ.

      ಗ್ರಾಮದ ವರದರೆಡ್ಡಿ ಕೋಳಿ ವ್ಯಾಪಾರಿಯಾಗಿದ್ದು, ಸೋಮವಾರ ರಾತ್ರಿ ತಮ್ಮ ಮನೆಯ ಮುಂಭಾಗ ಕಾಂಪೌಂಡ್‍ನಲ್ಲಿ ಎರಡು ದ್ವಿಚಕ್ರವಾಹನಗಳನ್ನು ನಿಲ್ಲಿಸಿದ್ದರು. ಆಗಂತುಕರು ಮಧ್ಯ ರಾತ್ರಿಯಲ್ಲಿ ಹೀರೊಗ್ಲಾಮರ್ ಮತ್ತು ಸ್ಕೂಟಿಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದರಿಂದ ಎರಡು ವಾಹನಗಳು ಸುಟ್ಟುಕರಕಲಾಗಿದ್ದು, ಸ್ಥಳಕ್ಕೆ ಅರಸೀಕೆರೆ ಪೊಲೀಸ್ ಠಾಣಾ ಎಸ್.ಐ. ಲಕ್ಷ್ಮೀಕಾಂತ್ ಭೇಟಿ ನೀಡಿ ಸ್ಥಳ ತನಿಖೆ ಕೈಗೊಂಡು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here