ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡದ ಶಾಲೆಗಳ ಅನುದಾನ ರದ್ದು

0
2

ಬೆಂಗಳೂರು:
   ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡದ ಶಾಲೆಗಳ ಅನುದಾನ ರದ್ದು ಮಾಡುವ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಿದೆ.

      ಅನುದಾನಿತ ಶಾಲೆಗಳ ಅನುದಾನ ತಡೆ ಹಿಡಿಯುವಂತೆ ಸರ್ಕಾರ ಆದೇಶ ನೀಡಿದೆ. 5 ವರ್ಷದ ಸರಾಸರಿ ಫಲಿತಾಂಶದಲ್ಲಿ ಶೇ. ಒಂದರಷ್ಟು ಕಡಿಮೆಯಾದರೂ ಅನುದಾನ ಕಡಿತ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜಿನೀಶ್ ಹೇಳಿದ್ದಾರೆ. ಈ ಮೂಲಕ ಅವರು ಮತ್ತೊಂದು ವಿವಾದ ಸೃಷ್ಟಿಮಾಡಿದ್ದಾರೆ.

      ಈ ಮೂಲಕ ಅನುದಾನಿತ ಶಾಲೆಗಳ ಮೇಲೆ ಸರ್ಕಾರ ಗದಾ ಪ್ರಹಾರ ಮಾಡಿದೆ. ಆದರೆ ಈ ನಿಯಮ ಸರ್ಕಾರಿ ಶಾಲೆಗಳಿಗೆ ಅನ್ವಯವಾಗದೆ, ಕೇವಲ ಅನುದಾನಿತ ಶಾಲೆಗಳಿಗೆ ಮಾತ್ರ ನಿಯಮ ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ.

      ಅನುದಾನ ನೀಡದಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶ ನೀಡಿರುವುದು ಇದೀಗ ಸರ್ಕಾರಿ ಶಾಲೆಗಳಿಗೊಂದು ನ್ಯಾಯ, ಅನುದಾನಿತ ಶಾಲೆಗಳಿಗೊಂದು ನ್ಯಾಯ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

LEAVE A REPLY

Please enter your comment!
Please enter your name here