ಚಿಕ್ಕನಾಯಕನಹಳ್ಳಿ : ಎ.ಪಿ.ಎಂ.ಸಿ ಯಾರ್ಡ್ ನಲ್ಲಿ ತೀವ್ರಕೂಂಡ ಪ್ರತಿಭಟನೆ

0
28

ಚಿಕ್ಕನಾಯಕನಹಳ್ಳಿ:

      ಪಟ್ಟಣದಲ್ಲಿ ನಡೆಯುವ ಸಂತೆಯನ್ನು ಎ.ಪಿ.ಎಂ.ಸಿ ಯಾರ್ಡ್‍ಗೆ ಬದಲಾಯಿಸಲು ಒಪ್ಪಿಗೆ ನೀಡಿರುವ ಪುರಸಭೆ ತನ್ನ ತೀರ್ಮಾನವನ್ನು ಬದಲಾಯಿಸಿ ಈಗ ನಡೆಯುತ್ತಿರುವ ಜಾಗದಲ್ಲೇ ಸಂತೆಯನ್ನು ನಡೆಸುವಂತೆ ಸಂತೆ ವ್ಯಾಪಾರಸ್ಥರು ಪುರಸಭೆಗೆ ಮನವಿ ಮಾಡಿದ್ದಾರೆ.

      ಪಟ್ಟಣದಲ್ಲಿ ನಡೆಯುವ ಸೋಮವಾರ ಸಂತೆಯನ್ನು ಎ.ಪಿ.ಎಂ.ಸಿ ಯಾರ್ಡ್‍ಗೆ ಬದಲಾಯಿಸಿ, ತರಕಾರಿ ಸಂತೆಯನ್ನು ಸೋಮವಾರ ನಡೆಸಲು ಹಾಗೂ ಕುರಿಸಂತೆಯನ್ನು ಶನಿವಾರ ನಡೆಸಲು ಪುರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಿರುವುದನ್ನು ವ್ಯಾಪಾರಸ್ಥರು ಖಂಡಿಸಿದರು, ಪುರಸಭೆ ಕೈಗೊಂಡಿರುವ ಈ ತಿರ್ಮಾನ ಶೋಚನೀಯವಾಗಿದ್ದು ತೀರ್ಮಾನ ಬದಲಿಸಿ ಎಂದು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದ ವ್ಯಾಪಾರಸ್ಥರು ಈಗ ನಡೆಯುತ್ತಿರುವ ಸಂತೆಯು ಊರಿನ ಮಧ್ಯಭಾಗದಲ್ಲಿದೆ, ಇದರಿಂದ ವ್ಯಾಪಾರಸ್ಥರಿಗೂ, ಸಾರ್ವಜನಿಕರಿಗೂ ಅನುಕೂಲವಾಗಿದೆ ಹಾಗಾಗಿ ಸಂತೆಯನ್ನು ಕಾಲೇಜು ಬಳಿ ನಡೆಯುತ್ತಿರುವ ಜಾಗದಲ್ಲಿ ಹಾಗೂ ಕುರಿ ಸಂತೆಯನ್ನು ಸೋಮವಾರವೇ ನಡೆಸಬೇಕೆಂದು ಮನವಿ ಸಲ್ಲಿಸಿದರು.

      ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ಸಂತೆಯು ಒಂದು ದಿನ ಮಾತ್ರ ನಡೆಯುತ್ತದೆ ಅಲ್ಲದೆ ಪಟ್ಟಣದ ಮಧ್ಯಭಾಗದಲ್ಲಿ ಸಂತೆ ನಡೆಯುತ್ತಿರುವುದರಿಂದ ನಾಗರೀಕರೆಲ್ಲರಿಗೂ ಅನುಕೂಲವಾಗುತ್ತದೆ, ಬೆಂಗಳೂರು ಸಿಟಿಗಳಲ್ಲಿ ವಿಪರೀಟ ಗಲಾಟೆ, ಗದ್ದಲದ ನಡುವೆಯೂ ಸಂತೆ ನಡೆಯುತ್ತದೆ ಅಲ್ಲಲ್ಲೇ ಶಾಲಾ-ಕಾಲೇಜುಗಳಿವೆ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ, ನಾಗರೀಕರಿಗೆ ಅನುಕೂಲವಾಗುವಂತೆ ಸಂತೆಗಳು ನಡೆಯುತ್ತಿವೆ ಎಂದ ಅವರು, ಪುರಸಭೆ ಕುರಿ ಸಂತೆಯನ್ನು ಶನಿವಾರ ಮಾಡುವುದು ಎಂದು ತೀರ್ಮಾನ ಕೈಗೊಂಡಿದೆ ಆದರೆ ಇದು ಕೆಟ್ಟ ತೀರ್ಮಾನವಾಗಿದೆ, ಪಟ್ಟಣದಲ್ಲಿ ಶನಿವಾರ ಎಲ್ಲಾ ಅಂಗಡಿಗಳು ರಜಾ ಮಾಡುವುದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆಯುವುದಿಲ್ಲ, ಹಳ್ಳಿಗಳಿಂದ ಬರುವ ಜನರಿಗೆ ಸಾಮಾನು ಕೊಳ್ಳಲು ಮತ್ತೊಂದು ದಿನ ಹಣ ವೆಚ್ಚ ಮಾಡಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಹಾಗಾಗಿ ಪುರಸಭೆ ವ್ಯಾಪಾರಸ್ಥರು, ರೈತರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಈಗ ನಡೆಯುತ್ತಿರುವ ತರಕಾರಿ ಹಾಗೂ ಕುರಿ ಸಂತೆಯನ್ನು ಅದೇ ಸ್ಥಳದಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.

      ಈ ಸಂದರ್ಭದಲ್ಲಿ ಸಂತೆ ವ್ಯಾಪಾರಸ್ಥರಾದ ಸಿ.ಟಿ.ನಾಗರಾಜು, ರಮೇಶ್, ರಂಗಸ್ವಾಮಿ, ಜಯರಾಮಯ್ಯ, ನಾಗರಾಜು, ಆಂಜನಮ್ಮ, ಗಂಗಮ್ಮ, ಗೀತಾ, ಅನಂತ್, ರಂಗನಾಥ್, ತಿಮ್ಮಕ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here