ಏಡ್ಸ್ ರೋಗ ತಡೆಗಟ್ಟಲು ಜಾಗೃತಿ ಕಾರ್ಯಕ್ರಮ ಅವಶ್ಯ

0
34

ಹಗರಿಬೊಮ್ಮನಹಳ್ಳಿ:

      ಮಾರಣಾಂತಿಕ ಏಡ್ಸ್ ರೋಗವನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರಿಗೆ ಇದರ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡಲು ವಿವಿದೆಡೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಮುಕ್ತಿ ಏಡ್ಸ್ ಜಾಗೃತಿ ಮಹಿಳಾ ಸಂಘದ ತಾಲೂಕು ಘಟಕದ ಮೇಲ್ವಿಚಾರಕಿ ವೈ.ದುರುಗಮ್ಮ ಹೇಳಿದರು.

      ತಾಲೂಕಿನ ತಂಬ್ರಹಳ್ಳಿ ಗ್ರಾಮದ ಕೊಟ್ಟೂರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ಸಂಘದ ವತಿಯಿಂದ ಆಯೋಜಿಸಿದ್ದ ಏಡ್ಸ್ ಜಾಗೃತಿ (ಲಿಂಕ ವರ್ಕರ್) ಯೋಜನೆಯನ್ನು ಗ್ರಾಮದ ನಕಾಶೆ ಬಿಡಿಸುವ ಮೂಲಕ ಪ್ರಾರಂಭಿಸಿ ಮಾತನಾಡಿದರು. ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೇನ್ಸನ್ ಸೊಸೈಟಿ ಅನುದಾನಡಿ ಈ ಸಂಘ ಕಾರ್ಯ ನಿರ್ವಹಿಸುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ 7 ತಾಲೂಕುಗಳ 100 ಹಳ್ಳಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

      ಎಚ್‍ಐವಿ ಹಾಗೂ ಕ್ಷಯ ರೋಗ ತಡೆಗಟ್ಟಲು ಬೀದಿ ನಾಟಕ, ಗುಂಪು ಚರ್ಚೆ, ಮನೆ ಮನೆ ಬೇಟಿ, ಐಸಿಟಿಸಿ, ಐಇಸಿ ಮಾಹಿತಿ ಶಿಬಿರಗಳು ಸೇರಿದಂತೆ 9 ತಿಂಗಳು ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನೀಡಲಾಗುವುದು ಎಂದರು.

      ಗ್ರಾ.ಪಂ ಪಿಡಿಓ ಕೆ. ಶರಣಪ್ಪ, ಸದಸ್ಯರಾದ ಮಡಿವಾಳರ ಕೊಟ್ರೇಶ್, ಗೌರಜ್ಜನವರ ಗಿರೀಶ್, ಗ್ರಾಮದ ಬಾಳೆಕಾಯಿ ಚಿದಾನಂದಪ್ಪ, ಸಹವರ್ತಿ ಕಾರ್ಯಕರ್ತರಾದ ಮಾರುತಿ, ಸೋಮಶೇಖರ್, ಕಮಲಮ್ಮ, ಅಂಗನಾಡಿ ಕಾರ್ಯಕರ್ತೆಯರಾದ ಉಮಾದೇವಿ ಪಾಟೀಲ್, ಭುವನೇಶ್ವರಿ, ಬಲ್‍ಕುಷ್‍ಬೇಗಂ, ದೀಪಾ, ಆಶಾ ಕಾರ್ಯಕರ್ತೆಯರಾದ ಸುರೇಕಾ, ಪಾರ್ವತಿ, ಮಂಗಳಾ, ಮತ್ತಿತರರಿದ್ದರು.

LEAVE A REPLY

Please enter your comment!
Please enter your name here