ಏರ್ ಶೋ ಸ್ಥಳಾಂತರ ವಿಚಾರಕ್ಕೆ ತೆರೆ : ಬೆಂಗಳೂರಿನಲ್ಲೇ ನಡೆಯಲಿದೆ ‘ಏರ್ ಇಂಡಿಯಾ -2019’

0
185

ಬೆಂಗಳೂರು:

      ಈ ಬಾರಿ ’ಏರೋ ಇಂಡಿಯಾ–2019’ ಹನ್ನೆರಡನೇ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ನಡೆಸುವುದಾಗಿ ಕೇಂದ್ರ ಸರ್ಕಾರ ಶನಿವಾರ ನಿರ್ಧಾರ ಪ್ರಕಟಿಸಿದೆ. 

      ಬೆಂಗಳೂರಲ್ಲಿಯೇ ಏರ್‌ ಶೋ ನಡೆಯಲಿದ್ದು ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡುವುದಿಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

      ನಗರದಲ್ಲಿನ ಭಾರತೀಯ ವಾಯುಪಡೆಯ ಯಲಹಂಕ ನೌಕಾನೆಲೆಯಲ್ಲಿ 2019ರ ಫೆಬ್ರುವರಿ 20–24ರ ವರೆಗೆ ವೈಮಾನಿಕ ಪ್ರದರ್ಶನವು ನಡೆಯಲಿದ್ದು, ಐದು ದಿನಗಳ ಕಾರ್ಯಕ್ರಮದಲ್ಲಿ ಹತ್ತಾರು ರಾಷ್ಟ್ರಗಳ ರಕ್ಷಣಾ ಮತ್ತು ವೈಮಾನಿಕ ಉತ್ಪನ್ನಗಳ ವಹಿವಾಟು ಸಂಸ್ಥೆಗಳು ಪ್ರದರ್ಶನದ ಭಾಗವಾಗಿರಲಿವೆ.  

      ವೈಮಾನಿಕ ಕ್ಷೇತ್ರದಲ್ಲಿನ ಬೃಹತ್‌ ಹೂಡಿಕೆದಾರರು, ಜಾಗತಿಕ ಮಟ್ಟದ ನಾಯಕರು, ವಿಚಾರವಾದಿಗಳೂ ಸೇರಿ ಜಗತ್ತಿನ ಹಲವು ಭಾಗಗಳಿಂದ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಾಗರಿಕ ವೈಮಾನಿಕ ಕ್ಷೇತ್ರದ ಬೆಳವಣಿಗೆ ಹಾಗೂ ಮೇಕ್‌ ಇಂಡಿಯಾಗೆ ಪೂರಕವಾಗಿ ಪ್ರದರ್ಶನ ಆಯೋಜಿಸಲು ರಕ್ಷಣಾ ಉತ್ಪಾದನಾ ವಿಭಾಗ ನಿರ್ಧರಿಸಿದೆ. ಸಾರ್ವಜನಿಕರಿಗೂ ಟಿಕೆಟ್‌, ಪಾಸ್‌ಗಳ ಮೂಲಕ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಅವಕಾಶವಿದೆ. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

LEAVE A REPLY

Please enter your comment!
Please enter your name here