ಐಪಿಎಲ್ ಕ್ರಿಕೆಟ್: ರಾಜಸ್ಥಾನಕ್ಕೆ 4 ವಿಕೆಟ್‍ಗಳ ಗೆಲುವು

0
7

ಜೈಪುರ:

ಐಪಿಎಲ್‍ನ 43ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಚೆನ್ನೈ ಸೂಪರ್‍ಕಿಂಗ್ಸ್ ವಿರುದ್ಧ 4 ವಿಕೆಟ್‍ಗಳ ಜಯ ಸಾಧಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಉತ್ತಮ ಬ್ಯಾಟಿಂಗ್ ನೆರವಿನಿಂದಾಗಿ ನಿಗದಿತ 20 ಓವರ್‍ಗಳಲ್ಲಿ 176 ರನ್‍ಗಳನ್ನು ಗಳಿಸಿತು. ಸುರೇಶ್ ರೈನಾ 52, ಶೇನ್ ವ್ಯಾಟ್ಸನ್ 39, ಧೋನಿ ಅಜೇಯ 33, ಸ್ಯಾಮ್ 27, ಅಂಬಟಿ ರಾಯುಡು 12 ರನ್‍ಗಳನ್ನು ಗಳಿಸಿದರು. ರಾಜಸ್ಥಾನ ಪರ ಆರ್ಚರ್ 2, ಸೋದಿ 1 ವಿಕೆಟ್ ಗಳಿಸಿದರು.

ನಂತರ ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ತಂಡದ ಆರಂಭಿಕ ಆಟಗಾರ ಬಟ್ಲರ್‍ರವರ ಅಬ್ಬರದ ಬ್ಯಾಟಿಂಗ್‍ನಿಂದಾಗಿ 19.5 ಓವರ್‍ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡು 177 ರನ್‍ಗಳನ್ನು ಗಳಿಸಿ 4 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಬಟ್ಲರ್ ಅಜೇಯ 95, ಬಿನ್ನಿ 22, ಸ್ಯಾಮ್ಸನ್ 21, ಗೌತಮ್ 13, ಬೆನ್ 11 ರನ್‍ಗಳನ್ನು ಗಳಿಸಿದರು.

ಚೆನ್ನೈ ಪರ ಡೇವಿಡ್ 1, ಹರ್ಬಜನ್ 1, ಜಡೇಜಾ 1, ಠಾಕುರ್ 1, ಬ್ರೇವೊ 1 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್:

ಚೆನ್ನೈ : 176/4 (20)
ರಾಜಸ್ಥಾನ: 177/6 (19.5)

LEAVE A REPLY

Please enter your comment!
Please enter your name here