ಒಂದು ದಿನ ರೈತರಿಗೆ ಮೀಸಲು : ಹೆಚ್‍ಡಿಕೆ

0
112

 ಮಂಡ್ಯ:

      ತಿಂಗಳಲ್ಲಿ ಒಂದು ದಿನ ಜನರ ಮಧ್ಯದಲ್ಲಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ-ಸೀತಾಪುರ ಗ್ರಾಮಗಳಲ್ಲಿ ಗದ್ದೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಮಾತನಾಡುತ್ತಿದ್ದರು. ಯಾವುದೇ ಸಂಕಷ್ಠ ಬಂದರೂ ಕೂಡಾ ದೃತಿಗೆಡದೆ,ಆತ್ಮಹತ್ಯೆಗೆ ಶರಣಾಗದೆ, ಆತ್ಮಸ್ಥೈರ್ಯದಿಂದಿರಿ ನಾನು ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ರೈತರಿಗೆ ತಿಳಿಸಿದರು.

      ರಾಜ್ಯದ 30 ಜಿಲ್ಲೆಯ ರೈತರಿಗಾಗಿ ನಾನು ಮುಡುಪಾಗಿದ್ದೇನೆ. ಈಗಾಗಲೇ ರೈತರ ಸಾಲಮನ್ನಾ ಕೂಡಾ ಮಾಡಿದ್ದೇನೆ.ಆಧುನಿಕ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.ಈ ಬಗ್ಗೆ ನೀಲಿ ನಕ್ಷೆಯನ್ನೂ ಕೂಡಾ ಸಿದ್ದಪಡಿಸಿರುವುದಾಗಿ ತಿಳಿಸಿದರು.

      ಗೌರಿಗಣೇಶ ಹಬ್ಬದ ಒಳಗಾಗಿ ರೈತರಿಗೆ ಸಿಹಿ ಸುದ್ದಿ ನೀಡುವುದಾಗಿ ಹೇಳಿದ ಅವರು, 37 ಕ್ಷೇತ್ರಗಳಲ್ಲಿ ಗೆದ್ದರೂ ಕೂಡಾ ನಾನು ಮುಖ್ಯಮಂತ್ರಿಯಾಗಿದ್ದೇನೆ.ಅದರಲ್ಲೂ ಮಂಡ್ಯದಲ್ಲಿ 7 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವು ಗೆಲುವು ಸಾಧಿಸಿದೆ.ಅದನ್ನು ಎಂದಿಗೂ ನಾನು ಮರೆಯಲಾರೆ. ನಾನು ನಿಮಗೆ ಆತ್ಮಸ್ಥೈರ್ಯ ತುಂಬಲು ಮಾತ್ರ ಬರುತ್ತೇನೆಯೇ ಹೊರತು, ನಾನಿಲ್ಲಿ ರಾಜಕೀಯ ಮಾಡಲು ಬರುವುದಿಲ್ಲ.ತಿಂಗಳಲ್ಲಿ ಒಂದು ದಿನ ಮಧ್ಯದಲ್ಲಿರುವುದಾಗಿ ತಿಳಿಸಿದರು. ಈ ಬಾರಿ ಶ್ರೀಮಾತೆ ಚಾಮುಂಡೇಶ್ವರಿ ನಮ್ಮ ಮೇಲೆ ಕರುಣೆ ತೋರಿದ್ದಾಳೆ. ಹೇಗೆಂದರೆ, ನಮ್ಮ ರಾಜ್ಯ ಹಾಗೂ ತಮಿಳುನಾಡು ರೈತರನ್ನು ಉಳಿಸಿದ್ದಾಳೆ ಎಂದರು.

      ನಾನು ಕೆಲಸ ಮಾಡಲು ಬಲ ತುಂಬಿ ಸಹಕಾರ ನೀಡಿ, ಉತ್ತರ ರಾಜ್ಯ ಬೇರೆ ಅಲ್ಲ, ದಕ್ಷಿಣ ರಾಜ್ಯ ಬೇರೆ ಅಲ್ಲ. ನನಗೆ ಕರ್ನಾಟಕ ಒಂದೆ, ರಾಜ್ಯದ 30 ಜಿಲ್ಲೆಗಳನ್ನು ದತ್ತು ತೆಗೆದುಕೊಂಡು ಕೆಲಸ ಮಾಡುವೆ. ನನ್ನ ಮೇಲೆ ಸಂಶಯ ಪಡಬೇಡಿ, ನಾನು ಕೆಲಸ ಮಾಡಲು ಅವಕಾಶ ನೀಡಿ. ನಾನು ಏಳೇಳು ಜನ್ಮಕ್ಕೂ ಮಂಡ್ಯ ಜಿಲ್ಲೆಯ ಋಣ ತೀರಿಸಲಾಗುವುದಿಲ್ಲ, ಮಂಡ್ಯ ನಗರ ಅಭಿವೃಧ್ಧಿ ಮಾಡುವುದೇ ನನ್ನ ಬಯಕೆಯಾಗಿದೆ ಎಂದು ಹೇಳಿದರು.

 

LEAVE A REPLY

Please enter your comment!
Please enter your name here