ಓಲಾ ಬುಕ್ ಮಾಡಿ : ಡ್ರೈವರ್ ಬಳಿಯೇ 20 ಸಾವಿರ ದೋಚಿದ ಖದೀಮರು

0
61

ರಾಮನಗರ: 

      ಓಲಾ ಕ್ಯಾಬ್ ಚಾಲಕನನ್ನು ಬೆದರಿಸಿ 20 ಸಾವಿರ ದರೋಡೆ ಮಾಡಿದ ಆರೋಪಿಗಳು, ಚಾಲಕ ತಪ್ಪಿಸಿಕೊಳ್ಳುತ್ತಲೇ ತಾವೂ ಪರಾರಿಯಾಗಿದ್ದಾರೆ. 

      ಸೋಮಶೇಖರ್ ಎಂಬವರ ಕಾರನ್ನು ನಾಲ್ವರು ವ್ಯಕ್ತಿಗಳು ಬುಕ್ ಮಾಡಿದ್ದರು. ಶುಕ್ರವಾರ ಆಡುಗೋಡಿಯಲ್ಲಿ ಹತ್ತಿದ ಆ ನಾಲ್ವರು ಪ್ರಯಾಣಿಕರು ಕ್ಯಾಬ್ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಇಡೀ ರಾತ್ರಿ ಬೆಂಗಳೂರನ್ನು ಸುತ್ತಿಸಿದ್ದಾರೆ. ಅಷ್ಟೇ ಅಲ್ಲದೇ ಚಾಲಕನ ಎಟಿಎಂ ಕಾರ್ಡ್ ಮೂಲಕ 20 ಸಾವಿರ ಹಣವನ್ನು ಡ್ರಾ ಮಾಡಿಸಿಕೊಂಡಿದ್ದಾರೆ. ಬಳಿಕ ರಾಮನಗರ ಮಾರ್ಗವಾಗಿ ಚನ್ನಪಟ್ಟಣದತ್ತ ಬಂದಿದ್ದಾರೆ.

      ಆರೋಪಿಗಳು ಚಾಲಕನೊಂದಿಗೆ ಶನಿವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಚನ್ನಪಟ್ಟಣದ ‌ಆನಂದ ಭವನ ಎಂಬ ಲಾಡ್ಜ್ ನಲ್ಲಿ  ರೂಂ ಮಾಡಿ ಕ್ಯಾಬ್ ಚಾಲಕನನ್ನು ಕೂಡಿ ಹಾಕಿದ್ದಾರೆ.  ಈ ಸಂದರ್ಭ ಚಾಲಕ ಸೋಮಶೇಖರ್ ಕೊಠಡಿಯ ಕಿಟಕಿಯಿಂದ ಹೊರಗೆ ಜಿಗಿದು ತಪ್ಪಿಸಿಕೊಂಡರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು.

      ಚಾಲಕ ತಪ್ಪಿಸಿಕೊಂಡ ನಂತರ ದರೋಡೆಕೋರರು ಲಾಡ್ಜ್ ನಿಂದ  ಎಸ್ಕೇಪ್ ಆಗಿದ್ದಾರೆ.  ಚನ್ನಪಟ್ಟಣ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here