ಕನ್ನಡದ ಬದಲು ಅನ್ಯಭಾಷೆ ಬಳಸಿದ್ರೆ ಪರವಾನಗಿ ರದ್ದು..!

0
32

ಬೆಂಗಳೂರು:

      ಯಾವುದೇ ಅಂಗಡಿಗಳ ಮೇಲೆ ಇನ್ನುಮುಂದೆ ಅನ್ಯಭಾಷೆಯ ನಾಮಫಲಕ ಕಂಡು ಬಂದರೆ, ಅಂತಹ ಅಂಗಡಿಗಳ ಪರವಾನಿಗೆ ರದ್ದು ಪಡಿಸಲು ಬಿಬಿಎಂಪಿ ಮೇಯರ್ ಖಡಕ್ ಸೂಚನೆ ನೀಡಿದ್ದಾರೆ.

      ಬಿಬಿಎಂಪಿ ನಿಯಮದ ಪ್ರಕಾರ ಶೇ 60 ರಷ್ಟು ಕನ್ನಡದಲ್ಲಿ, ಹಾಗೂ ಶೇ 40 ರಷ್ಟು ಅನ್ಯಭಾಷೆ ಬಳಸಲು ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿ ಅನ್ಯ ಭಾಷೆಯನ್ನು ಬಳಕೆ ಮಾಡಿದ್ದೇ ಆದಲ್ಲಿ ಕೂಡಲೇ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡುವಂತೆ ವಾಣಿಜ್ಯ ಪರವಾನಿಗೆ ನೀಡುವ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

      ನಗರದಲ್ಲಿ ಹೆಚ್ಚುತ್ತಿರುವ ಅನ್ಯಭಾಷೆ ನಾಮಫಲಕಗಳು ಮತ್ತು ಜಾಹೀರಾತುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಹೋರಾಟಗಾರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮುಂದಿನ ವಾರದಿಂದ ಅನ್ಯ ಭಾಷೆ ಬೋರ್ಡ್ ಗಳಿಗೆ ಕತ್ತರಿ ಹಾಕುವ ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here