ಕನ್ನಡ ಹೆಸರಾಂತ ಲೇಖಕ, ಚಿಂತಕ ಗಿರೀಶ್‌ ಕಾರ್ನಾಡ್‌ಗೆ ಆಕಾಶದೀಪ ಪ್ರಶಸ್ತಿ

0
46

ನವದೆಹಲಿ

          ದೆಹಲಿಯ ಅಮರ ಉಜಾಲಾ ಪ್ರತಿಷ್ಠಾನ ಭಾರತೀಯ ಭಾಷೆಗಳ ಲೇಖಕರು ಮತ್ತು ಸಾಹಿತಿಗಳಿಗೆ ನಿಡುವ ಆಕಾಶದೀಪ ಶಬ್ದ ಸಮ್ಮಾನ ಗೌರವಕ್ಕೆ ಕನ್ನಡ ಹೆಸರಾಂತ ಲೇಖಕ, ಚಿಂತಕ ಗಿರೀಶ್‌ ಕಾರ್ನಾಡ್‌ ಮತ್ತು ಹಿಂದಿ ಲೇಖಕ ಡಾ. ನಾಮವರ ಸಿಂಹ ಪಾತ್ರರಾಗಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ನೀಡಲಾಗುವ ಈ ಪ್ರಶಸ್ತಿ ಐದು ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.ಗಿರೀಶ್ ಕಾರ್ನಾಡ್‌ ಅವರಿಗೆ ಹಿಂದಿಯೇತರ ಭಾಷೆಯಲ್ಲಿನ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. ಹಿಂದಿ ಲೇಖಕ ಡಾ. ನಾಮವರ ಸಿಂಹ ಅವರು ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ಈ ಪುರಸ್ಕಾರವನ್ನು ಪಡೆದಿದ್ದಾರೆ.ನಾಮವರ ಸಿಂಹ ವಿಮರ್ಶೆಯಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಲೇಖಕ ಗಿರೀಶ್‌ ಕಾರ್ನಾಡ್‌ ನಾಟಕ ರಚನೆ ಮಾತ್ರವಲ್ಲದೆ ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here