ಕರಡಿಗೆ ಅಪರಿಚಿತ ವಾಹನ ಡಿಕ್ಕಿ ಸ್ಥಳದಲ್ಲೇ ಸಾವು

0
29

ಕೋಲಾರ :

      ಆಹಾರ ಅರಸಿ ನಾಡಿಗೆ ಬಂದ ಕರಡಿಯೊಂದು ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ ನಡೆದಿದೆ.

       ಇತ್ತೀಚಿನ ದಿನಗಳಲ್ಲಿ ಕಾಡುಗಳನ್ನು ನಾಶಮಾಡುತ್ತಾ ನಾಡನ್ನು ಬೆಳಸುತ್ತಿದ್ದಾರೆ. ಇದರಿಂದ ಕಾಡಿನಲ್ಲಿರಬೇಕಾದ ಮೂಕಪ್ರಾಣಿಗಳು ನಾಡಿನತ್ತ ಲಗ್ಗೆಯಿಡುತ್ತಿವೆ. ಇತ್ತೀಚಿಗೆ ಹಲವು ಪ್ರಕರಣಗಳಲ್ಲಿ ನೋಡಿದಂತೆ ನಗರಗಳಿಗೆ ಚಿರತೆಗಳು, ಆನೆಗಳು ಬಂದಿದ್ದವು. ಇವುಗಳ ಜೊತೆಗೆ ಕರಡಿಗಳು ಕೂಡಾ ಅತಿ ಹೆಚ್ಚಾಗಿ ನಾಡಿಗೆ ಭೇಟಿ ನೀಡುತ್ತಿವೆ. ಅದೇ ರೀತಿ ನಿನ್ನೆ ತಡರಾತ್ರಿ ಆಹಾರ ಅರಸಿ ನಾಡಿಗೆ ಬಂದ ಕರಡಿಯೊಂದು ಅಪರಿಚಿತ ವಾಹನ ಡಿಕ್ಕಿಯಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದೆ.

      ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಜಿಲ್ಲೆಯ ಮಾಲೂರು ಮಾಸ್ತಿ – ಬೂದಿಕೋಟೆ ಮಾರ್ಗ ಮಧ್ಯ ಬರುವ ದೇವರಹಳ್ಳಿ ಗ್ರಾಮದಲ್ಲಿ ರಸ್ತೆ ಅಪಘಾತ ನಡೆದಿದೆ. ಕರಡಿ ಎರಡು ವರ್ಷ ವಯಸ್ಸಿನದ್ದು ಎಂದು ತಿಳಿದು ಬಂದಿದೆ. ಇನ್ನೂ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಲೂರಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here