fbpx
January 22, 2019, 1:54 am

ನುಡಿಮಲ್ಲಿಗೆ -  "ಯಾರು ಕೋಲನ್ನು ಉಪಯೋಗಿಸುವುದಿಲ್ಲವೋ ಅವನು ತನ್ನ ಮಗನ ಶತ್ರು." - ಬೈಬಲ್

Home Uncategorized ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ

0
24

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ 2017

#ಕರ್ನಾಟಕ_ಖಾಸಗಿ_ವೈದ್ಯಕೀಯ_ಸಂಸ್ಥೆಗಳ_ವಿಧೇಯಕ_2017

#ಭಾಗ_೧
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ 2007 ಕಾಯ್ದೆಯನ್ನು 2017 ರಲ್ಲಿ ರಾಜ್ಯ ಸರ್ಕಾರ ಒಂದಷ್ಟು ತಿದ್ದುಪಡಿಗೆ ಒಳಪಡಿಸಿದೆ. 2007 ರ ಕಾಯ್ದೆಯನ್ನು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ಸಂಪೂರ್ಣ ಒಪ್ಪಿದ್ದರು. ಈಗ ಮಾಡುತ್ತಿರುವ ತಿದ್ದುಪಡಿಗಳಿಗೆ ಇವರ ತಕರಾರು. ಮೊದಲನೆಯ ತಿದ್ದುಪಡಿ ಏನು ಎಂದು ಗಮನಿಸೋಣ.

ಸರ್ಕಾರ ಒಂದು ಪರಿಣತರ ಒಂದು ತಂಡವನ್ನು ಮಾಡಿ ಯಾವ ಚಿಕಿತ್ಸೆಗೆ ಎಷ್ಟು ಹಣ ಆಗುತ್ತದೆ ಅನ್ನುವುದನ್ನು ತೀರ್ಮಾನಿಸುತ್ತದೆ. Adhoc ಸಮಿತಿಗಳನ್ನು ರಚಿಸುವುದರಿಂದ ಚಿಕಿತ್ಸೆಯ ವೆಚ್ಚ ವೈಜ್ಞಾನಿಕವಾಗಿ ಸರಿಯಾಗಿಯೇ ಇರುತ್ತದೆ. ಚಿಕಿತ್ಸೆಯ ವೆಚ್ಚದ ಪಟ್ಟಿಯನ್ನು ಎಲ್ಲರಿಗೂ ಕಾಣಿಸುವಂತೆ ಆಸ್ಪತ್ರೆಯಲ್ಲಿ ಹಾಕಬೇಕು. ಯಾವುದಾದರೂ ವ್ಯಕ್ತಿ ಆಸ್ಪತ್ರೆ ಸೇರಿದಾಗ ಅವನಿಗೆ ಒಂದು ಖರ್ಚಿನ ವಿವರ ಇರುವ ಒಂದು ಅಂದಾಜು ಕೊಡಬೇಕು. ಕೊನೆಯದಾಗಿ ಬಿಲ್ಲಿನ ಮೊತ್ತ ಅಂದಾಜು ವೆಚ್ಚವನ್ನು ಮೀರಬಾರದು. ವೆಚ್ಚ ಮೀರಿದರೆ ಆ ವ್ಯಕ್ತಿಗೆ ಆಸ್ಪತ್ರೆ ಸಮಂಜಸ ವಿವರಣೆ ಕೊಡಬೇಕು.

ಈ ತಿದ್ದುಪಡಿಯಿಂದ ವೈದ್ಯರ ಕೈ ಹೇಗೆ ಕಟ್ಟಿ ಹಾಕಿದಂತೆ ಆಯಿತು ಮತ್ತು ಕರಾಳ ಕಾಯ್ದೆ ಹೇಗೆ ಆಯಿತು. ಒಬ್ಬ ರೋಗಿಯಾಗಿ ನಮಗೆ ಚಿಕಿತ್ಸೆಯ ವೆಚ್ಚವನ್ನು ಮುಂಚಿತವಾಗಿ ತಿಳಿಯುವ ಹಕ್ಕು ಇಲ್ಲವೇ. Patients charter ಗೆ ವೈದ್ಯರು ಕೊಡುವ ಗೌರವ ಇದೆಯೇ ಅನ್ನುವುದನ್ನು ನಾವುಗಳು ಖಾಸಗಿ ವೈದ್ಯರನ್ನೆ ಕೇಳಬೇಕು.

ಮುಂದಿನ ಪೋಸ್ಟ್ ನಲ್ಲಿ ಜಿಲ್ಲಾಧಿಕಾರಿಯ ಸಮಿತಿಯ ತಿದ್ದುಪಡಿಯ ಬಗ್ಗೆ ತಿಳಿಯೋಣ.

#ಭಾಗ_೨
ಮನುಕುಲಕ್ಕೆ ಮಾರಕವಾಗಿದ್ದ ಹಲವು ರೋಗಗಳನ್ನು ಆಧುನಿಕ ವೈದ್ಯಕೀಯ ಪದ್ಧತಿ ನಿಯಂತ್ರಿಸಿದೆ. ಇದರ ಜೊತೆಗೆ ರೋಗಿಗಳನ್ನು (ನನ್ನ ಅಭಿಪ್ರಾಯದಲ್ಲಿ ವ್ಯಕ್ತಿ ಎಂದು ಓದಿಕೊಳ್ಳಿ, ರೋಗಿ ಅನ್ನುವ ಪದ ವ್ಯಕ್ತಿಯನ್ನು ಸುಲಿಗೆ ಮಾಡಲು ಸೃಷ್ಟಿಸಿರುವಂತದ್ದು) ಗಿರಾಕಿಗಳಂತೆ ನೋಡುತ್ತಿದೆ. ವೈದ್ಯರು ಜೀವ ಉಳಿಸುವ ಚಿಕಿತ್ಸೆಗಿಂತ ಕೃತಕ ಗರ್ಭಧಾರಣೆ, ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಸರ್ಜರಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ.

ವೈದ್ಯ ಶಾಸ್ತ್ರ ಅನ್ನುವುದು ರೋಗಿ (ವ್ಯಕ್ತಿ), ವೈದ್ಯ ಮತ್ತು ಔಷಧಿಯ ಸುತ್ತ ಕಟ್ಟಲ್ಪಟ್ಟಿದೆ. ಇದರ ಜೊತೆಗೆ ಔಷಧಗಳ ಮತ್ತು ಉಪಕರಣಗಳ ತಯಾರಕರು ಮತ್ತು ಮಾರಾಟಗಾರರು ಜೊತೆಗೂಡಿದ್ದಾರೆ. ಇವರೆಲ್ಲರ ಜೊತೆ ಹಣದ ಆಮಿಷಕ್ಕೆ ಒಳಗಾಗಿ ವೈದ್ಯರು ಶಾಮೀಲು ಆಗಿದ್ದಾರೆ. ಒಟ್ಟಿನಲ್ಲಿ ರೋಗಿ ಎಂದರೆ ಲಾಭ ಮಾಡುವುದಕ್ಕೆ ಇರುವ ಒಂದು ದಾರಿ ಆಗಿದೆ.

ಭಾರತದಲ್ಲಿ ವ್ಯಕ್ತಿಗಳ ದಿವಾಳಿತನಕ್ಕೆ ವೈದ್ಯಕೀಯ ವೆಚ್ಚ ಸಾಮಾನ್ಯ ಎರಡನೇ ಕಾರಣವಾಗಿದೆ. ವೈದ್ಯಕೀಯ ಕ್ಷೇತ್ರ ಇವತ್ತು ಹೆಚ್ಚು ಹಣ ಹರಿಯುವ, ಅತಿಯಾದ ಲಾಭವಿರುವ, ನಷ್ಟದ ಸಾಧ್ಯತೆ ಕಡಿಮೆ ಇರುವ ಉದ್ಯಮವಾಗಿದೆ.

ಆದ್ದರಿಂದ ಇಂತಹ ಒಂದು ಉದ್ಯಮವನ್ನು ನಿಯಂತ್ರಿಸುವುದು ಚುನಾಯಿತ ಸರ್ಕಾರದ ಕರ್ತವ್ಯ ಅಲ್ಲವೇ. ಈ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಒಂದು ನೊಂದಣೆ ಪ್ರಾಧಿಕಾರ ಮಾಡುವುದು ಹೇಗೆ ತಪ್ಪಾಗುತ್ತದೆ ಅನ್ನುವುದನ್ನು ಖಾಸಗಿ ವೈದ್ಯರು ಜನಸಾಮಾನ್ಯರಿಗೆ ವಿವರಿಸಲಿ.
ಈ ತಿದ್ದುಪಡಿಯಲ್ಲಿ ರೋಗಿ ಹಕ್ಕುಗಳ ಸಂರಕ್ಷಣೆ, ದೂರು ನಿವಾರಣ ವ್ಯವಸ್ಥೆ, ಬೆಲೆ ನಿಯಂತ್ರಣ, ಇವುಗಳು ರೋಗಿಗಳ ಹಿತಾಸಕ್ತಿಯನ್ನು ಕಾಪಾಡುವುದಾದರೆ, ನೊಂದಣೆ ಪ್ರಾಧಿಕಾರದಲ್ಲಿ, ದೂರು ನಿವಾರಣ ಸಮಿತಿಗಳಲ್ಲಿ ಮತ್ತು ಬೆಲೆ ನಿಗದಿ ಮಾಡುವ ಉಪ ಸಮಿತಿಗಳಲ್ಲಿ ಪ್ರೈವೇಟ್ ಆಸ್ಪತ್ರೆಗಳ ಪ್ರತಿನಿಧಿಗಳನ್ನು ಸೇರಿಸಲಾಗಿದೆ, ಈ ರೀತಿ ಯಾರಿಗೂ ಮೋಸ ಇಲ್ಲ. ನಾಗರಿಕರು ಮತ್ತು ವೈದ್ಯರು ಇಬ್ಬರೂ ಇದನ್ನು ಬೆಂಬಲಿಸಬೇಕು.

#ಭಾಗ_೩
Patient’s Charter and Establishment Charter ಅನ್ನುವ ಮತ್ತೊಂದು ತಿದ್ದುಪಡಿ ಇದೆ. ಇದರ ತಾತ್ಪರ್ಯವನ್ನು “ವೈದ್ಯಕೀಯ ವಿಜ್ಞಾನವೆಂಬ ರೋಗ” ಅನ್ನುವ ಲೇಖನ ಚೆನ್ನಾಗಿ ವಿವರಿಸುತ್ತದೆ.

ರೋಗಿಗಳ(ವ್ಯಕ್ತಿಗಳ) ಸಮುದಾಯವು ವೈದ್ಯರು ಹೊರಬೇಕಾದ ಹೊರೆಗಳ ಬಗ್ಗೆ ಮತ್ತು ಅವರು ಎದುರಿಸಬೇಕಾದ ಮಿತಿಗಳ ಬಗ್ಗೆ ಸಹಾನುಭೂತಿ ಹೊಂದಿರಬೇಕು.

ವೈದ್ಯರಿಗೆ ಮಾನವ ಜನಾಂಗದ ತೊಂದರೆಗಳನ್ನು, ಶರೀರದ ಕಾಯಿಲೆಗಳನ್ನು ಆಳವಾಗಿ ಇಣುಕಿ ನೋಡುವ ಅನುಮತಿಯಿರುವುದರಿಂದ ವೈದ್ಯರು ಕೃತಾರ್ಥತೆಯನ್ನು ಹೊಂದಬೇಕು.

ಆರೋಗ್ಯ ಮತ್ತು ರೋಗದ ನಿಗೂಢಗಳಿಗೆ ವೈದ್ಯರು ಹತ್ತಿರವಾಗಿರುವುದರಿಂದ ಖಾಯಿಲೆಯಿಂದ ನರಳುತ್ತಿರುವ ಸಹ-ಮಾನವರಿಗೆ ಆರಾಮವನ್ನು, ಶಾಂತಿಯನ್ನು ತರಲು ಸಮರ್ಥರಿರಬೇಕು.

ಬಹುತೇಕ ಔಷಧಿ ಮತ್ತು ಚಿಕಿತ್ಸೆ ನರಳುವಿಕೆಯಿಂದ ಉಪಶಮನ ಮತ್ತು ಆರಾಮ ನೀಡುವುದನ್ನು ಕುರಿತಾದದ್ದೇ ಹೊರತು, ಪ್ರಧಾನವಾಗಿ ಅದು ಪ್ರಾಣ ಉಳಿಸುವುದಕ್ಕೆ ಸಂಬಂಧಪಟ್ಟಿಲ್ಲ. ಈ ವಿಚಾರ ರೋಗಿ ಮತ್ತು ವೈದ್ಯರಿಗೆ ಅರ್ಥವಾದರೆ Charters ತಿದ್ದುಪಡಿಯನ್ನು ವಿರೋಧಿಸಲು ಕಾರಣಗಳೆ ಉಳಿಯುವುದಿಲ್ಲ

LEAVE A REPLY

Please enter your comment!
Please enter your name here