ಕಲಾಂರವರ ಸರಳ-ಸಜ್ಜನಿಕೆ ಅಳವಡಿಸಿಕೊಳ್ಳೊಣ

0
33

ದಾವಣಗೆರೆ:

    ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸರಳತೆ, ಸಜ್ಜನಿಕೆ, ಮನುಷ್ಯತ್ವದ ಗುಣಗಳನ್ನು ನಾವೆಲ್ಲಾ ಸ್ವಲ್ಪವಾದರೂ ಜೀವನದಲ್ಲಿ ರೂಢಿಸಿಕೊಂಡು ಬದಲಾಗೋಣ ಎಂದು ಶಿಕ್ಷಣ ಸಂಯೋಜಕರಾದ ಆರ್. ಚೇತನಾ ಆಶಯ ವ್ಯಕ್ತಪಡಿಸಿದರು.
ನಗರದ ಎಂಸಿಸಿ ಬಿ ಬ್ಲಾಕ್‍ನಲ್ಲಿರುವ ಭಾರತ ಸೇವಾ ದಳದ ಸಾಂಸ್ಕೃತಿಕ ಭವನದಲ್ಲಿ ಭಾರತ ಸೇವಾ ದಳ ದಾವಣಗೆರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉತ್ತರ ವಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ, ಗುರು ಪೂರ್ಣಿಮ ದಿನೋತ್ಸವ, ತಾಲ್ಲೂಕು ಮಟ್ಟದ ಶಿಕ್ಷಕರ ಮಿಲಾಪ್ ಶಿಬಿರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

   ಕಲಾಂ ಅವರು ರಾಷ್ಟ್ರಪತಿಯಾಗಿ ಅಷ್ಟೇ ಅಲ್ಲದೇ ನಾಯಕತ್ವದ ಗುಣವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. ತಮ್ಮ ಉಸಿರು ಇರುವ ತನಕ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಕೇವಲ ವಿಜಾನಿಯಾಗಿ ಅಷ್ಟೇ ಅಲ್ಲದೇ ಶೈಕ್ಷಣಿಕವಾಗಿಯೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಇವರು ಯಾವುದೇ ಜಾತಿ, ಮತ, ಪಂಥಕ್ಕೆ ಸೀಮಿತವಾಗಿದ್ದವರಲ್ಲ ಎಂದು ಸ್ಮರಿಸಿದರು.
ಸರಳತೆ, ಸಜ್ಜನಿಕೆ, ಮನುಷ್ಯತ್ವ, ಮಾನವೀಯತೆ ಗುಣಗಳು ಕಲಾಂ ಅವರ ಕಣಕಣದಲ್ಲೂ ಇತ್ತು. ಸಾಮಾನ್ಯ ವ್ಯಕ್ತಿಯಾಗಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಇಂಂತಹ ಶ್ರೇಷ್ಠ ವ್ಯಕ್ತಿತ್ವವೇ ಅವರ ಸಾಧನೆಗೆ ಪೂರಕವಾಗಿತ್ತು. ಅಲ್ಲದೇ ಸಾಧನೆ, ಸೇವೆ ಮೆಚ್ಚಿ ಜನರ ಮನಮಿಡಿಯಿತು. ಇಂತಹ ಮಹಾತ್ಮರ ಆದರ್ಶನೀಯ ಗುಣಗಳನ್ನು ಒಂದು-ಎರಡನ್ನಾದರೂ ನಮ್ಮ ಜೀವನದಲ್ಲಿ ಪಾಲಿಸುವುದು ಅವಶ್ಯವಿದೆ. ಮಕ್ಕಳಿಗೂ ಇಂತಹ ಆದರ್ಶ ಬದುಕು ಕಟ್ಟಿಕೊಡುವ ಜವಾಬ್ದಾರಿ ಶಿಕ್ಷಕರು ಹೊಂದಬೇಕಿದೆ ಎಂದು ಅಭಿಪ್ರಾಯಪಟ್ಟರು.

     ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೊಟ್ರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಮುಖ್ಯಮಂತ್ರಿ ಪದವಿ ವಿಜೇತ, ಜಿಲ್ಲಾ ಹೋಂ ಗಾರ್ಡ್ಸ್‍ನ ಕಮಾಂಡೆಂಟ್ ಡಾ. ಬಿ.ಹೆಚ್. ವೀರಪ್ಪ, ಭಾರತ ಸೇವಾ ದಳದ ಜಿಲ್ಲಾ ಸಂಘಟಕ ಎಂ. ಅಣ್ಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತ ಸೇವಾ ದಳದ ತಾಲ್ಲೂಕು ಅಧ್ಯಕ್ಷ ಟಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕೆ.ಬಿ. ಪರಮೇಶ್ವರಪ್ಪ, ಉತ್ತರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಕ ಮಲ್ಲಿಕಾರ್ಜುನ್, ದಕ್ಷಿಣ ವಲಯ ದೈಹಿಕ ಪರಿವೀಕ್ಷಕ ಪ್ರಕಾಶ್, ಕೆ.ಜಿ. ಗೌಡ್ರು, ಮುರುಗೇಂದ್ರಯ್ಯ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here